ನಿಡ್ಪಳ್ಳಿ: ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

0
ಬಿ.ಜೆ.ಪಿ ಸರಕಾರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ- ಸಂಜೀವ ಮಠಂದೂರು
ನಿಡ್ಪಳ್ಳಿ; ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ ಸರಕಾರ ನಮ್ಮ ರಾಜ್ಯದ ಪ್ರತಿ ಗ್ರಾಮ ಅಭಿವೃದ್ಧಿಯಾಗ ಬೇಕು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ನಿಡ್ಪಳ್ಳಿ ಗ್ರಾಮದ ಹಲವು ರಸ್ತೆ ಕಾಂಕ್ರೀಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಡಿ.8 ರಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಪ್ರತಿ ಹಳ್ಳಿಯ, ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಶಾಲೆಗಳು ಸುಸಜ್ಜಿತವಾಗಿ ಇರಬೇಕು. ಆ ನಿಟ್ಟಿನಲ್ಲಿ ಎಲ್ಲಿಗೆ ಅವಶ್ಯಕತೆ ಇದೆಯೋ ಅಲ್ಲಿಗೆ ಅನುದಾನ ನೀಡಿ ಅಭಿವೃದ್ಧಿ ಪಡಿಸಲು ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದರು. ಹಿಂದೆ ಎಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಈಗ ನಡೆಯುತ್ತಿದ್ದು ಸಮೃದ್ದ ಕರ್ನಾಟಕ ನಿರ್ಮಾಣ ಆಗುತ್ತಿದೆ ಎಂದರು. ಕಾಮಗಾರಿಗಳು ಕಳಪೆಯಾಗದಂತೆ ಸಾರ್ವಜನಿಕರು ಗಮನ ಹರಿಸ ಬೇಕು ಎಂದು ತಿಳಿ ಹೇಳಿದರು. 
ಶಂಕು ಸ್ಥಾಪನೆಯಾದ ವಿವಿಧ ಕಾಮಗಾರಿಗಳು- ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇಲ್ಲಿ ಶಿಕ್ಷಣ ಇಲಾಖೆಯಿಂದ ತರಗತಿ ಕೋಣೆ ನಿರ್ಮಾಣಕ್ಕೆ 13.90 ಲಕ್ಷ. ಮುಖ್ಯ ಮಂತ್ರಿಗಳ 2021-22 ನೇ ಸಾಲಿನ ವಿಶೇಷ ಅನುದಾನದಲ್ಲಿ ಕೊಪ್ಪಳ- ಚೆಲ್ಯರಮೂಲೆ ರಸ್ತೆ ಕಾಂಕ್ರೀಟಿಗೆ 10 ಲಕ್ಷ. ಕುಕ್ಕುಪುಣಿ- ಚೆರ್ತಿಮೂಲೆ ರಸ್ತೆ ಕಾಂಕ್ರೀಟಿಗೆ 10 ಲಕ್ಷ. ಮೊಟ್ಟಿಕಲ್ಲು ನುಳಿಯಾಲು ರಸ್ತೆ ಕಾಂಕ್ರೀಟಿಗೆ 10 ಲಕ್ಷ. ಕೋಡಿ- ನುಳಿಯಾಲು ರಸ್ತೆ ಕಾಂಕ್ರೀಟಿಗೆ 10 ಲಕ್ಷ. ಕಟ್ಟತ್ತಾರು- ಗೋಳಿತ್ತಡಿ- ಚಿಕ್ಕೋಡಿ ರಸ್ತೆಗೆ 10 ಲಕ್ಷ. ಸಂಸದರ ಅನುದಾನದಲ್ಲಿ ಚೂರಿಪದವು ಶಾಲಾ ರಸ್ತೆ ಅಭಿವೃದ್ಧಿಗೆ 10 ಲಕ್ಷ. ತಂಬುತ್ತಡ್ಕ- ಕಾನ- ಚೇವುತಕಲ ರಸ್ತೆಗೆ 10 ಲಕ್ಷ. ಈ ಎಲ್ಲಾ ಕಾಮಗಾರಿಗೆ ತೆಂಗಿನ ಕಾಯಿ ಒಡೆದು ಶಂಕುಸ್ಥಾಪನೆ ನೆರವೇರಿಸಲಾಯಿತು. ಅನಾಜೆ- ಸೆರ್ತಾಜೆ ಎಂಬಲ್ಲಿ 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡ ಕಾಲು ಸಂಕವನ್ನು ಶಾಸಕರು ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ. ಡಿ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಾಣಾಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್ .ಬಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಾಣಾಜೆ ಸಿ.ಎ ಬ್ಯಾಂಕ್ ನಿರ್ದೇಶಕ ತಿಮ್ಮಣ್ಣ ರೈ ಆನಾಜೆ, ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ,  ಪಂಚಾಯತ್ ಸದಸ್ಯರಾದ ಮುರಳೀಕೃಷ್ಣ ಮುಂಡೂರು, ಬಾಲಚಂದ್ರ ಕುಜುಂಬೋಡಿ ಸೇರಿದಂತೆ ಹಲವಾರು ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.
ತಂಬುತ್ತಡ್ಕ- ಕಾನ- ಚೇವುತಕಲ ರಸ್ತೆ ಕಾನ ಶಿವಪ್ಪ ಪೂಜಾರಿಯವರ ವರ್ಗ ಜಾಗದಲ್ಲಿ ಸುಮಾರು ಉದ್ದ ಹಾದು ಹೋಗುತ್ತಿದ್ದು ಸುಮಾರು ವರ್ಷಗಳ ಕಾಲ ಸ್ವಲ್ಪ ಸಮಸ್ಯೆಯಲ್ಲಿತ್ತು. ಶಾಸಕರು ಶಿವಪ್ಪ ಪೂಜಾರಿಯವರ ಮನೆಗೆ ಖುದ್ದು ಭೇಟಿ ನೀಡಿ ಸಮಸ್ಯೆಯ ಬಗ್ಗೆ ಪರಾಮರ್ಶೆ ನಡೆಸಿ  ಇತ್ಯರ್ಥ ಪಡಿಸಿದ ಕಾರಣ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿವಪ್ಪ ಪೂಜಾರಿ ಮತ್ತು ಅವರ ಸಹೋದರರಾದ ಜಯಂತ, ಸದಾನಂದ ಕೂಡ ಗ್ರಾಮದ ಅಭಿವೃದ್ಧಿಗೆ ಸಮ್ಮತಿ ಸೂಚಿಸಿದರು. ಅನೇಕ ವರ್ಷ ಕೋರ್ಟ್ ಮೆಟ್ಟಿಲೇರಿದ್ದ ಸಮಸ್ಯೆಯನ್ನು ನಮ್ಮ ಶಾಸಕರು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ್ದಕ್ಕಾಗಿ ಇವರು ಬಹಳ ಸಂತಸ ವ್ಯಕ್ತಪಡಿಸಿದರು. 

LEAVE A REPLY

Please enter your comment!
Please enter your name here