ವಿಟ್ಲ: ಟೈಮಿಂಗ್ ವಿಚಾರ – ಖಾಸಗಿ ಬಸ್ಸು ಚಾಲಕರ ಮಧ್ಯೆ ಹೊಡೆದಾಟ – ಮೂವರ ಬಂಧನ

0

ವಿಟ್ಲ: ಟೈಮಿಂಗ್ಸ್ ವಿಚಾರದಲ್ಲಿ ಎರಡು ಖಾಸಗಿ ಬಸ್ಸಿನ ಚಾಲಕರು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ ವಿಟ್ಲದ ಖಾಸಗಿ ಬಸ್ಸುನಿಲ್ದಾಣದಲ್ಲಿ ಡಿ.9 ರಂದು ಬೆಳಗ್ಗೆ ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಕಲಹ ನಡೆಸುತ್ತಿದ್ದ ಮೂವರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.ಚಿಂತನ್, ಹೊನ್ನಯ್ಯ, ಯತಿರಾಜ್ ಬಂಧಿತರು.

ಕಳೆದ ಎರಡು ದಿನಗಳ ಹಿಂದೆ ಎರಡು ಖಾಸಗಿ ಬಸ್ ಚಾಲಕರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಟ ನಡೆದಿತ್ತು. ಡಿ.೯ರಂದು ಬೆಳಗ್ಗೆ ಮಹೇಶ್ ಮತ್ತು ಮಣಿಕಂಠ ಬಸ್ ಚಾಲಕರು ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಾರೆ‌. ಘಟನೆಯಿಂದ ಬಸ್ ನಿಲ್ದಾಣದಲ್ಲಿ ಅಲ್ಪ ಹೊತ್ತು ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿತ್ತು. ಮಾಹಿತಿ ಅರಿತು ಸ್ಥಳಕ್ಕೆಆಗಮಿಸಿದ ವಿಟ್ಲ ಠಾಣಾ ಪೊಲೀಸರು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿನಿತ್ಯ ಖಾಸಗಿ ಬಸ್ ಚಾಲಕರ ಹೊಡೆದಾಟ, ಬಡಿದಾಟ ಸಹಿತ ಮತ್ಸರೋಟಗಳು ನಡೆಯುತ್ತಿರುವುದು ನಾಗರೀಕರಲ್ಲಿ‌ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಪೊಲೀಸರ ನಡೆ ಸಾರ್ವಜನಿಕರಲ್ಲಿ ಪ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here