ನಗರಸಭೆ ಹೊರಗುತ್ತಿಗೆ ನೌಕರ ಚಾಲಕ ಸಚಿನ್ ನಿಧನ

0

ಪುತ್ತೂರು: ನಗರಸಭೆ ಹೊರಗುತ್ತಿಗೆ ನೌಕರ ಕಸ ಸಾಗಾಟ ವಾಹನದ ಚಾಲಕ ಸಚಿನ್(27ವ)ರವರು ಡಿ. 9ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ಪುತ್ತೂರು ಬಿಜೆಪಿ ಓಣಿ ನಿವಾಸಿಯಾಗಿದ್ದು ನಗರಸಭೆ ಕಸ ಸಾಗಾಟ ವಾಹನದ ಚಾಲಕರಾಗಿ ಕಳೆದ ಸುಮಾರು 3ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಒಂದು ದಿನದ ಹಿಂದೆ ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಾಯಿ ವಿಜಯ ಎಂಬವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here