ಡಿ.13ಕ್ಕೆ ತಾಲೂಕು ಸೀರತ್ ಕಮಿಟಿ ಆಶ್ರಯದಲ್ಲಿ ಮುಸ್ಲಿಂ ಜಮಾಅತಿನ ಪ್ರಮುಖರಿಗೆ ಸರಕಾರಿ ಸವಲತ್ತುಗಳ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಸರಕಾರ ಸಮುದಾಯಕ್ಕೆ ಹಲವಾರು ಸವಲತ್ತುಗಳನ್ನು ನೀಡಿದೆ. ಅದರೆ ಸಮುದಾಯಕ್ಕೆ ಸಿಗುವ ಸವಲತ್ತುಗಳ ಮಾಹಿತಿ ಕೊರತೆ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸರಕಾರದ ಯೋಜನೆಗಳನ್ನು ಉಚಿತವಾಗಿ ಮಾರ್ಗದರ್ಶನ ನೀಡಿ ಕಾರ್ಯರೂಪಕ್ಕೆ ತರುವ ಯೋಜನೆಗೆ ಸೀರತ್ ಕಮಿಟಿ ಮುಂದಾಗಿದ್ದು, ಡಿ.13ಕ್ಕೆ ತಾಲೂಕಿನ ಮುಸ್ಲಿಂ ಜಮಾಅತಿನ ಪ್ರಮುಖರಿಗೆ ಸರಕಾರಿ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಪುತ್ತೂರು ಕೇಂದ್ರ ಜುಮ್ಮಾ ಮಸ್ಜಿದ್ ಬಳಿ ಇರುವ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲ ಜರುಗಲಿದೆ ಎಂದು ಸೀರತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಅವರು ಹೇಳಿದರು.

ಅವರು ಪುತ್ತೂರು ಸುದ್ದಿ ಮೀಡಿಯಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರಕಾರದಿಂದ ಸಿಗುವ ಸವಲತ್ತುಗಳ ಪೈಕಿ ಅಭಾ ಕಾರ್ಡ್ ಎಂಬ ಯೋಜನೆ ಕಾರ್ಯರೂಪದಲ್ಲಿದೆ. ಇದರಿಂದ ಬಿಪಿಎಲ್ ಎಪಿಎಎಲ್ ಪಡಿತರ ಚೀಟಿದಾರರಿಗೆ ಆಸ್ಪತ್ರೆಯಲ್ಲಿ ವಿಶೇಷವಾದ ಯೋಜನೆಗಳನ್ನು ರೂಪಿಸಿರುತ್ತದೆ. ವಕ್ಫ್ ಇಲಾಖೆಯಿಂದ ವಕ್ಪ್ ಸಂಸ್ಥೆಗಳಿಗೆ ಮಹತ್ತರವಾದ ಯೋಜನೆಗಳನ್ನು ಅಳವಡಿಸಿರುತ್ತದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಕಟ್ಟಡ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಿಗುವ ವಿಶೇಷ ಯೋಜನೆಗಳು, ಅಲ್ಪಸಂಖ್ಯಾತ ಕಲ್ಯಾನ ಇಲಾಖೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳಿವೆ. ಈ ಎಲ್ಲಾ ಯೋಜನೆಗಳ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ನೀಡಲಾಗುತ್ತದೆ.

ಕಾರ್ಯಾಗಾರವು ಬೆಳಿಗ್ಗೆ ಗಂಟೆ 9.30ರಿಂದ ಆರಂಭಗೊಳ್ಳಲಿದೆ. ಕಾರ್ಯಾಗಾರವನ್ನು ಪುತ್ತೂರಿನ ಮುದರ್ರಿಸ್ ಸಯ್ಯದ್ ಪೂಕೋಯ ತಂಙಳ್‌ರವರ ದುರ್ವಾಶೀರ್ವಚನದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ಎಂ ಅವರು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಸಯ್ಯದ್ ಮೊಹಝ್ಝಮ್ ಪಾಷಾ, ಕಾರ್ಮಿಕ ಇಲಾಖಾಧಿಕಾರಿ ಗಣಪತಿ ಹೆಗ್ಡೆ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಮುಹಮ್ಮದ್ ರಫೀಕ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಜಮಾಅತಿನ ಪ್ರಮುಖರು ಭಾಗವಹಿಸಿ, ಸರಕಾರದ ಯೋಜನೆಗಳನ್ನು ಆಯಾ ವ್ಯಾಪ್ತಿಯ ಜಮಾಅತಿನಲ್ಲಿ ಕಾರ್ಯರೂಪಕ್ಕೆ ತರುವಂತೆ ಸೀರತ್ ಕಮಿಟಿಯ ಮೂಲಕ ನಾವು ವಿನಂತಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೀರತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎ ಶಕೂರ್ ಹಾಜಿ ಕಲ್ಲೇಗ, ಕೋಶಾಧಿಕಾರಿ ಎಲ್.ಟಿ.ರಝಾಕ್ ಹಾಜಿ, ಕಾರ್ಯಕ್ರಮದ ಸಂಯೋಜಕ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ಮತ್ತು ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here