ಪುತ್ತೂರು : ಆರ್ಯಾಪು ಗ್ರಾಮದ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವ ಡಿ.10 ರಂದು ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಬಳಗದ ನೇತೃತ್ವದಲ್ಲಿ ವಿಜೃಂಭಣೆಯಿಂದ ಆರಂಭಗೊಂಡಿತು. ಅರ್ಚಕ ಶ್ರೀವತ್ಸ ಭಟ್ ಪೂಜಾ ಕೈಂಕರ್ಯ ನೇರವೇರಿಸಿದರು.
ಬೆಳಿಗ್ಗೆ 8 ರಿಂದ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ , ಆಶ್ಲೇಷ ಪೂಜೆ ಬಳಿಕ ಮಹಾಪೂಜೆ ನಂತರ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ, ದೇವರ ಸವಾರಿ ಮತ್ತು ಕಟ್ಟೆಪೂಜೆ ನಡೆಯಲಿದ್ದು, ಆ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ನೂರಾರು ಭಕ್ತರು ಶ್ರದ್ಧೆ, ಭಕ್ತಿ ಹಾಗೂ ಪ್ರೀತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾದರು. ದೇವಾಲಯದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಿ.ಟಿ.ಸುರೇಶ್, ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ ಸಹಿತ ಹಲವು ಗಣ್ಯರು ಮತ್ತು ಭಕ್ತಾದಿಗಳು ದೇವಿಯ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾದರು.
ದಶಂಬರ್ 11 (ನಾಳೆ) ನೇಮೋತ್ಸವ…
ಡಿ.11ರಂದು ಬೆಳಗ್ಗೆ 9 ರಿಂದ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನದ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಶ್ರೀ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆಯೆಂದು ದೇವಾಲಯದ ಅಧ್ಯಕ್ಷ ಗಂಗಾಧರ್ ಅಮೀನ್ ತಿಳಿಸಿದ್ದು ,ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ವಿನಂತಿಸಿದರು.