ಪುತ್ತೂರು: ಕಡಬ ತಾಲೂಕಿನ ಕಾಣಿಯೂರು ಶ್ರೀಲಕ್ಷ್ಮೀನರಸಿಂಹ ಯುವಕ ಮಂಡಲದ ೨೫ನೇ ವರ್ಷಾಚರಣೆ ‘ರಜತ ಸಂಭ್ರಮ’ ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಡಿ.12ರಂದು ಕಾಣಿಯೂರು ಜಾತ್ರಾಗದ್ದೆಯಲ್ಲಿ ನಡೆಯಲಿದೆ ಎಂದು ಶ್ರೀಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಹೇಳಿದ್ದಾರೆ.
ಡಿ.10ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಡಿ.12ರಂದು ಸೋಮವಾರ ಅಪರಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. 3ರಿಂದ ಸದಾನಂದ ಆಚಾರ್ಯ ಕಾಣಿಯೂರು ಸಂಯೋಜಕತ್ವದಲ್ಲಿ ಕಾಣಿಯೂರು ಪೇಟೆಯಲ್ಲಿ ಆಕರ್ಷಕ ಸಿಂಗಾರಿ ಮೇಳ, ಚೆಂಡೆ ನಾದದೊಂದಿಗೆ ಕುಣಿತ ಭಜನಾ ಮರವಣಿಗೆ ನಡೆಯಲಿದೆ.
ಸಂಜೆ ಗಂಟೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದ್ದು, ಕಾಣಿಯೂರು ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಗುರುಪ್ರಿಯಾ ನಾಯಕ್ ನಿರ್ದೇಶನದ ಪ್ರಖ್ಯಾತಿ ಯುವತಿ ಮಂಡಲ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಪುತ್ತೂರು ತಂಡದಿಂದ ಡ್ಯಾನ್ಸ್ ಧಮಾಕ- ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಲಿದೆ. ಸಂಜೆ ಗಂಟೆ 5ರಿಂದ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಹಾಸ್ಯ ವೈಭವ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಂಜೆ ಗಂಟೆ 7ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂದರು, ಮೀನುಗಾರಿಕೆ ಮತ್ತು ಒಳನಾಡು ಖಾತೆ ಸಚಿವ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಉಪಾಧ್ಯಕ್ಷರು ಮೈಸೂರು ಸ್ಯಾಕ್ಸ್ ಬೆಂಗಳೂರು ಇದರ ಉಪಾಧ್ಯಕ್ಷ ಪ್ರದೀಪ್ ಆರ್ ಗೌಡ ಅರುವಗುತ್ತು ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಆಶಯ ಭಾಷಣ ಮಾಡಲಿದ್ದಾರೆ. ವಕೀಲರಾದ ಮೋಹನ್ ಗೌಡ ಇಡ್ಯಡ್ಕ ಸನ್ಮಾನಿಸಲಿದ್ದಾರೆ.
ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ಮಾದೋಡಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಬಾಸು, ಎಸ್‌ಕೆಡಿಆರ್‌ಡಿಪಿ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ಸುಳ್ಳಿ, ಕಾಣಿಯೂರು ಗ್ರಾ.ಪಂ, ಉಪಾಧ್ಯಕ್ಷ ಗಣೇಶ್ ಉದನಡ್ಕ, ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಕಡಬ ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರಾಧಾಕೃಷ್ಣಪೆರ್ಲೋಡಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕ ಜಯಸೂರ್ಯ ರೈ ಮಾದೋಡಿ, ಪ್ರಸೂತಿ ತಜ್ಞೆ ಡಾ.ಚಂದ್ರಿಕಾ ಶಶಿಧರ್ ಪೆರುವಾಜೆ, ಯೋಗ ಗುರು ಕರುಣಾಕರ ಉಪಧ್ಯಾಯ, ನಾಟಿ ವೈದ್ಯೆ ಪೂವಕ್ಕ ಎಲುವೆ, ಗಿರಿಶಂಕರ ಸುಲಾಯ, ರಕ್ತದಾನಿ ರಾಕೇಶ್ ರೈ ಕೆಡೆಂಜಿ, ಶಿಕ್ಷಕ ನಾರಾಯಣ ಭಟ್, ಯುವಜನ ಸಂಘಟಕ ಸುರೇಶ್ ರೈ ಸೂಡಿಮುಳ್ಳು, ನಾಟಿವೈದ್ಯ ದಿನೇಶ್ ಮಾಳ, ಯುವ ಉದ್ಯಮಿ ಚಂದ್ರಶೇಖರ ಗೌಡ ಕೋಳಿಗದ್ದೆ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಸಾಧಕ ಪ್ರದೀಪ್ ಬೊಬ್ಬೆಕೇರಿ, ಕೃಷಿಕ ಕುಶಾಲಪ್ಪ ಗೌಡ ತೋಟ, ಕ್ರೀಡಾಸಾಧಕ ಸುಬ್ರಹ್ಮಣ್ಯ ಕೆ.ಎಂ., ನಿವೃತ್ತ ಯೋಧರಾದ ಪುರಂದರ ಗಾಳಿಬೆಟ್ಟು, ರಾಮಕೃಷ್ಣ ಮರಕ್ಕಡ, ಸಾಮಾಜಿಕ ಸೇವೆಗೆ ಯುವತೇಜಸ್ಸು ಟ್ರಸ್ಟ್‌ಗೆ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದೈವನರ್ತಕ ಸುಂದರ ಅಜಿರಂಗಳ, ಅಂಚೆ ಪೇದೆ ಉಮೇಶ್ ಬಂಡಾಜೆ, ಯುವ ಯಕ್ಷಗಾನ ಕಲಾವಿದರಾದ ದಿವಾಕರ ಮಾದೋಡಿ, ಚರಣ್ ಕಟ್ಟತ್ತಾರು, ರಾಷ್ಟ್ರೀಯ ಯೋಗಪಟು ಕು.ಪ್ರಣಮ್ಯ ಅಗಳಿ ಅವರನ್ನು ಅಭಿನಂದಿಸಲಾಗುವುದು. ರಾತ್ರಿ ಗಂಟೆ 9ರಿಂದ ಸಹಭೋಜನ ನಡೆಯಲಿದ್ದು, 9.30 ರಿಂದ ಕಾಪಿಕಾಡ್, ಬೋಳಾರ್, ವಾಮಂಜೂರು, ಅಭಿನಯದಲ್ಲಿ ಚಾಪರ ಕಲಾವಿದರಿಂದ ನಾಯಿದ ಬೀಲ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಲಕ್ಷ್ಮೀನರಸಿಂಹ ಯುವಕ ಮಂಡಲದ ಉಪಾಧ್ಯಕ್ಷ ಜಯಂತ ಅಬೀರ, ಕಾರ್ಯದರ್ಶಿ ವಿನಯ್ ಎಲುವೆ, ಮಾಜಿ ಅಧ್ಯಕ್ಷರಾದ ಪರಮೇಶ್ವರ ಅನಿಲ ಮತ್ತು ರಚನ್ ಬರೆಮೇಲು ಉಪಸ್ಥಿತರಿದ್ದರು.