ಪುತ್ತೂರು: ದೈವವನ್ನು ತೋರಿಸದೆ ದೈವದ ಶಕ್ತಿಯನ್ನು ತೋರಿಸಿ ತುಳುನಾಡಿನ ಜನರಿಂದ ಪ್ರಶಂಸೆ ಪಡೆದಿದ್ದ ಧರ್ಮ ದೈವ ಭಾಗ -2ಕ್ಕೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ನಿತಿನ್ ರೈ ಕುಕ್ಕುವಳ್ಳಿ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ದ.10 ರಂದು ನಡೆದ ಕರ್ನಾಟಕ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ.ದೇಶ ವಿದೇಶದ ಸುಮಾರು 186 ಚಿತ್ರಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಕಿರು ಚಿತ್ರ ವಿಭಾಗದಲ್ಲಿ ಧರ್ಮ ದೈವ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತುಳುನಾಡಿನ ದೈವದ ಕಾರ್ಣಿಕವನ್ನು ಯಾವುದೇ ಅಬ್ಬರವಿಲ್ಲದೆ,ಪರಿಪೂರ್ಣತೆಯಿಂದ ತೋರಿಸಿದ ಹೆಗ್ಗಳಿಕೆ ಹೊಂದಿದ ಧರ್ಮ ದೈವ ತೀರ್ಪುಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಡಾ| ಎಂ.ಎ ಮುಮ್ಮಿಗಟ್ಟಿ ಅಧ್ಯಕ್ಷತೆಯಲ್ಲಿ ನವ ಕರ್ನಾಟಕ ಫಿಲಂ ಅಕಾಡಮಿ ನಡೆಸಿದ ಎರಡನೇ ವರ್ಷದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರಧಾನ ಕಾರ್ಯಕ್ರಯ ಡಿ. 10 ರಂದು ಹುಬ್ಬಳಿಯಲ್ಲಿ ನಡೆದಿದ್ದು ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು .ಪ್ರಿಯಾಂಕ ಉಪೇಂದ್ರ ಹಿರಿಯ ನಟಿ ಭವ್ಯ ಸುನಿಲ್ ಪುರಾಣಿಕ್ ಪ್ರಶಸ್ತಿ ಪ್ರಧಾನ ಮಾಡಿದರು.
ಆಕೆ ಮೋಹಿನಿ ಕಿರು ಚಿತ್ರಕ್ಕೆ ಉತ್ತಮ ಹಾರರ್ ಚಿತ್ರ ಪ್ರಶಸ್ತಿ
ಸಂತೋಷ್ ಶೆಟ್ಟಿ ಅಂಗಡಿಗುತ್ತು ಇವರು ನಿರ್ಮಿಸಿರುವ ಆಕೆ ಮೋಹಿನಿ ಕನ್ನಡ ಕಿರು ಚಿತ್ರಕ್ಕೆ ಉತ್ತಮ ಹಾರರ್ ಪ್ರಶಸ್ತಿ ಬಂದಿದ್ದು ಈ ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನ ಮಾಡಿದ್ದಾರೆ ಅನ್ನೋದು ಮತ್ತೊಂದು ವಿಶೇಷ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕರ ಜೊತೆ ನಟ ರವಿ ಸ್ನೇಹಿತ್ ಕೂಡ ಪಾಲ್ಗೊಂಡಿದ್ದರು.