ಪುತ್ತೂರು: ಕರ್ನಾಟಕ ಈಜು ಅಸೋಸಿಯೇಷನ್ (ಕೆಎಸ್‌ಎ) ನ ರಾಜ್ಯಮಟ್ಟದ 21 ನೇ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಶಿಪ್ 2022-23 ನ್ನು ಮಂಡ್ಯದ ಪೀಪಲ್ಸ್ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಡಿಸೆಂಬರ್ 6 ರಿಂದ 9 ರವರೆಗೆ ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರು ಅಕ್ವಾಟಿಕ್ ಕ್ಲಬ್ (ಪಿಎಸಿ) ಲಾಸ್ಯ ಕಿಶನ್‌ರವರು 36.51 ರ ಸಮಯದೊಂದಿಗೆ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಡಿಸೆಂಬರ್ 29ರಂದು ತಿರುವನಂತಪುರದ ಪಿರಪ್ಪನ್‌ಕೋಡ್‌ನಲ್ಲಿ ನಡೆಯಲಿರುವ ದಕ್ಷಿಣ ವಲಯ ರಾಷ್ಟ್ರೀಯ ಸ್ಪರ್ಧೆಗೆ ಲಾಸ್ಯ ಕಿಶನ್ ಅರ್ಹತೆ ಪಡೆದಿದ್ದಾರೆ.
ಲಾಸ್ಯ ಅವರಿಗೆ ಕೋಚ್ ಪಾರ್ಥ ವಾರಣಾಶಿ, ದೀಕ್ಷಿತ್, ರೋಹಿತ್ ಮತ್ತು ನಿರೂಪ್ ಅವರು ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಹಾಗೂ ಮಂಗಳೂರಿನ ಸೈಂಟ್ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ನೀಡಿದ್ದರು.