ಪುತ್ತೂರು : ಆರ್ಯಾಪು ಗ್ರಾಮ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಡಿ.10 ರಂದು ಆರಂಭಗೊಂಡು ಡಿ.11 ರ ರಾತ್ರಿ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು. ಕುಕ್ಕಾಡಿ ತಂತ್ರಿ ಶ್ರೀಪ್ರೀತಮ್ ಪುತ್ತೂರಾಯ ಬಳಗದ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಡಿ.11 ರಂದು ಬೆಳಗ್ಗೆ 9 ರಿಂದ ಶ್ರೀದೇವರ ಬಳಿ ಹೊರಟು ಉತ್ಸವ, ದರ್ಶನದ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಂಜೆ 5ರಿಂದ ಶ್ರೀರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಭಂಡಾರ ತೆಗೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ನೇಮೋತ್ಸವ ನಡೆಯಿತು. ದೇವಾಲಯದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಿ.ಟಿ.ಸುರೇಶ್, ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ ಸಹಿತ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.