ಆಲಂಕಾರು ವಲಯ ಬಂಟರ ಸಂಘದಿಂದ ಬಂಟರ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ಕೃಷಿ ಪ್ರಶಸ್ತಿ ಪ್ರದಾನ

0

ಆಲಂಕಾರು: ಆಲಂಕಾರು ವಲಯ ಬಂಟರ ಸಂಘದ ಅಶ್ರಯದಲ್ಲಿ ಬಂಟರ ಸಮಾವೇಶ,ವಿದ್ಯಾರ್ಥಿ ವೇತನ ವಿತರಣೆ, ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ದಂಪತಿಗಳಿಗೆ ಗೌರವಾರ್ಪಣೆ ಹಾಗು ಕಲ್ಲಂಗಳಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.11ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.


ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈಯವರು ಮಾತನಾಡಿ ಎಲ್ಲಾ ಸಮಾಜದವರನ್ನು ಪ್ರೀತಿಸುವ ಬಂಟ ಸಮಾಜದವರು ಎಲ್ಲಾ ಕ್ಷೇತ್ರಗಳಿಗೂ ಅಪಾರ ಕೊಡುಗೆಯನ್ನು ನೀಡಿದವರು. ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವನ್ನು ನಾವು ಮಾಡಬೇಕು ಎಂದರು. ಬಂಟರ ಸಂಘದ ವತಿಯಿಂದ ನುರಿತ ತಜ್ಞರಿಂದ ಐ.ಎ.ಎಸ್,ಐ.ಪಿ.ಎಸ್ ಹಾಗು ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿಗಳನ್ನು ಯುವಕ,ಯುವತಿಯರಿಗೆ ನೀಡಬೇಕು ಎಂದ ಅವರು, ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ೧೫,೮೦೦ ಮಂದಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ ಎಂದರು.

ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾದ ಜಗಜ್ಜೀವನ್‌ದಾಸ್ ರೈಯವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರಿನ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದರೈ ಮನವಳಿಕೆಯವರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮಾಡುತ್ತಿರುವ ಸಮಾಜ ಮುಖಿ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿ ಸುಮಾರು 22 ವರ್ಷಗಳ ಹಿಂದೆ ನಾವೆಲ್ಲ ಒಟ್ಟು ಸೇರಿ ಆಲಂಕಾರು ವಲಯ ಬಂಟರ ಸಂಘವನ್ನು ಸ್ಥಾಪನೆ ಮಾಡಿದ್ದು ಇದರ ಮೂಲಕ ಹಲವು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಸಿದರು. ಮುಂಬೈ ಉದ್ಯಮಿ ಜಯಪ್ರಕಾಶ್ ರೈ ಪಟ್ಟೆಗುತ್ತು ಮಾತನಾಡಿ ಬಂಟರು ಧೈರ್ಯಶಾಲಿಯಾಗಿದ್ದು ಅವರಿಗೆ ರಕ್ತಗತವಾಗಿ ನಾಯಕತ್ವದ ಗುಣ ಬಂದಿದೆ. ನಮ್ಮ ಹಿರಿಯರ ತಂದೆ, ತಾಯಿಗಳ ಸೇವೆಯನ್ನು ಮಾಡಿ ನಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು ಎಂದರು.

ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ಜಗನ್ನಾಥ ಶೆಟ್ಟಿ ಅಂಬಾ, ಸೀತಾರಾಮ ರೈ ಕೇವಳ ದಂಪತಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಕಲ್ಲಂಗಳಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿಯನ್ನು ಆರುವಾರ ಸುಭಾಸ್ ಕುಮಾರ್ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಲಯ ಬಂಟರಿಗೆ ಆಯೋಜನೆ ಮಾಡಲಾಗಿದ್ದ ವಲಯ ಕ್ರೀಡಾಕೂಟದ ಬಹುಮಾನ ವನ್ನು ವಿತರಿಸಲಾಯಿತು. ನೂತನ ವಾಗಿ ಆಯ್ಕೆಯಾದ ಆಲಂಕಾರು ವಲಯ ಬಂಟರ ಸಂಘದ ಪದಾಧಿಕಾರಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ ಕೆ ಯವರು ಮಾತನಾಡಿ ನಾವೆಲ್ಲ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕು, ಸುಶಾನ್ ರೈ ಯವರ ನೇತೃತ್ವದಲ್ಲಿ ಮಾಡುವ ಯುವ ಬಂಟರ ಸಂಘದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಆಲಂಕಾರು ವಲಯ ಬಂಟರ ಸಂಘದ ೫೨ ಸೆಂಟ್ಸ್ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಎಲ್ಲಾರು ಸಹಕರಿಸುವಂತೆ ವಿನಂತಿಸಿದರು.

ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಯಮುನಾ ಎಸ್ ರೈ ಗುತ್ತುಪಾಲು, ಆಲಂಕಾರು ವಲಯ ಬಂಟರ ಸಂಘದ ಉಪಾಧ್ಯಕ್ಷರಾದ ಪ್ರಭಾ ರಘುನಾಥ ಚೌಟ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದಾಧಿಕಾರಿಗಳಾದ ಮೋಹನ ಶೆಟ್ಟಿ ಕೇವಳ, ವಿಶ್ವನಾಥ ರೈ ಎರಿಂಟಾಡಿ, ಉಮೇಶ ರೈ ಬಲೆಂಪೋಡಿ, ಶಶಿಧರ ರೈ ಮನವಳಿಕೆ, ಮಮತಾ ಶೆಟ್ಟಿ ಅಂಬರಾಜೆ, ಶೈಲಜಾ ಅಳ್ವ ಅತಿಥಿಗಳನ್ನು ಸ್ವಾಗತಿಸಿ, ಪ್ರನಾದ್ ಪ್ರಾರ್ಥಿಸಿ, ಸನ್ಮಾನಿತರ ಪರಿಚಯವನ್ನು ಪ್ರದೀಪ್ ರೈ ಮನವಳಿಕೆ ಬಹುಮಾನ ಪಟ್ಟಿಯನ್ನು ಧನ್ಯಪ್ರಶಾಂತ್ ರೈ ಮತ್ತು ಕವನ್ ರೈ ಯವರು ವಾಚಿಸಿದರು. ಲೋಕನಾಥ ರೈ ಕೇಲ್ಕ, ರಾಮಕುಂಜ ಕಾರ್ಯಕ್ರಮ ನಿರೂಪಿಸಿ, ಸುಭಾನು ರೈ ಮರುವಂತಿಲ ವಂದಿಸಿದರು.

ಆಲಂಕಾರು ವಲಯ ಬಂಟರ ಸಂಘದ ಕೋಶಾಧಿಕಾರಿ ಹಾಗು ಸಾಮಾಜಿಕ, ಧಾರ್ಮಿಕ ಮುಂದಾಳು ಸಂತೋಷ ರೈ ಆರುವಾರರವರ ನಿಧನ ಕ್ಕೆ ಸಂತಪ ಸೂಚಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ಪ್ರಮುಖರಲ್ಲಿ ಮನವಿ ಮಾಡಿದ್ದೇನೆ. ನನಗೆ ಬೆಂಬಲವಾಗಿ ನಿಂತವರನ್ನು ನಾನು ಎಂದೂ ಕೈ ಬಿಡುವುದಿಲ್ಲ ಅವರ ಋಣವನ್ನು ತೀರಿಸುತ್ತೇನೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡುವಂತೆ ಅಶೋಕ್ಕುಮಾರ್ ರೈಯವರು ಮನವಿ ಮಾಡಿದರು.

LEAVE A REPLY

Please enter your comment!
Please enter your name here