ಡಿ.18 : ಜೆಸಿಐ ವಿಟ್ಲ ಘಟಕದ ನೂತನ ಅಧ್ಯಕ್ಷರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

ವಿಟ್ಲ : ಅಂತರಾಷ್ಟ್ರೀಯ ಸಂಸ್ಥೆ ಜೆಸಿಐನ ವಲಯ 15 ರ ಪ್ರತಿಷ್ಠಿತ ಘಟಕ ಜೆಸಿಐ ವಿಟ್ಲದ 2023 ನೇ ಸಾಲಿನ ಅಧ್ಯಕ್ಷರಾಗಿ ನಿಯೋಜಿತರಾದ JFD ಪರಮೇಶ್ವರ ಹೆಗಡೆ,ಕಾರ್ಯದರ್ಶಿ JFM ದೀಕ್ಷಿತ್ ಜಿ. ,ಕೋಶಾಧಿಕಾರಿ JFM ರಿತೇಶ್ ಶೆಟ್ಟಿ ಹಾಗೂ ಉಳಿದ ಪದಾಧಿಕಾರಿಗಳ ‘ಪದಗ್ರಹಣ ಕಾರ್ಯಕ್ರಮ’ ಇದೇ ಡಿ.18 ರಂದು ವಿಟ್ಲದ ‘ಲಯನ್ ಸೇವಾ ಭವನ,ಸಿಂಹಗಿರಿ ಒಕ್ಕೆತ್ತೂರು’ಇಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳೂ, ಉಡುಪಿ ಕಲ್ಮಾಡಿಯASEMS ಕಾಲೇಜಿನ ಪ್ರಾಂಶುಪಾಲ ಪ್ರೋ.ಪವನ್ ಕುಮಾರ್ ಕಿರಣ್ ಕೆರೆ, ವಲಯ 15 ರ ನೂತನ ವಲಯಾಧ್ಯಕ್ಷ JFD ಪುಷೋತ್ತಮ್ ಶೆಟ್ಟಿ ಹಾಗೂ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ವಲಯ 15 ರ ನೂತನ ವಲಯ ಉಪಾಧ್ಯಕ್ಷ JC HGF ಅಜೀತ್ ಕುಮಾರ್ ರೈ ರವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here