ದೈವಾರಾಧನೆಯನ್ನು ವೇದಿಕೆಯಲ್ಲಿ ವೇಷ ಹಾಕುವುದನ್ನು ನಿಷೇಧಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವವರ ವಿರುದ್ಧ ಕ್ರಮಕೊಳ್ಳಿ- ಸಚಿವ ಅಂಗಾರ, ಶಾಸಕ ಮಠಂದೂರುರವರಿಗೆ ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವರಿಂದ ಮನವಿ

0

ಕಾಣಿಯೂರು: ದೈವಾರಾಧನೆಯನ್ನು ವೇದಿಕೆಯಲ್ಲಿ ವೇಷಹಾಕುವುದನ್ನು ನಿಷೇದಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಚಿವ ಎಸ್ ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಮನವಿ ಮಾಡಿದ್ದಾರೆ.


ತುಳುನಾಡಿನಲ್ಲಿ ದೈವಾರಾಧನೆ ಸಹಸ್ರಾರು ವರ್ಷಗಳಿಂದ ನಡೆದು ಬಂದಿದ್ದು ನಮ್ಮ ಪರವ ನಲಿಕೆ ಜನಾಂಗದವರು ದೈವ ನರ್ತನ ಮಾಡುತ್ತೇವೆ. ಈ ಆಚರಣೆಯನ್ನು ಸಂಸ್ಕಾರ, ಸಂಸ್ಕೃತಿ ಬದುಕಿಗೆ ನೆಮ್ಮದಿ ಕಂಡುಕೊಂಡಿರುವುದು ತುಳುನಾಡಿನವರು ಎಂಬುದು ನಿಮಗೆ ತಿಳಿದಿರುತ್ತದೆ. ಇದೀಗ ಅನೇಕ ಹೇಳಿಕೆಗಳು ಮತ್ತು ವೇದಿಕೆಗಳಲ್ಲಿ ಅಪಹಾಸ್ಯ ಮಾಡುವುದು ಎಲ್ಲರಿಗೂ ಮನಸ್ಸಿಗೆ ಘಾಸಿಯಾಗಿದ್ದು ಈ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೊಡ್ಡ ಬಳ್ಳಾಪುರದಲ್ಲಿ ಕೊರಗಜ್ಜನ ಹೆಸರಲ್ಲಿ ಹಣ ದಂಧೆ ಮೈಸೂರಿನಲ್ಲೂ, ಬೆಂಗಳೂರಿನಲ್ಲೂ ಅನೇಕ ಘಟನೆಗಳು ನಡೆದಿರುತ್ತವೆ. ಶಾಲಾ ವಾರ್ಷಿಕೋತ್ಸವ ಮತ್ತು ಇನ್ನಿತರ ಕಾರ‍್ಯಕ್ರಮದಲ್ಲಿ ದೈವದ ಬಣ್ಣ ಹಾಕಿ, ಗಗ್ಗರ ಕಟ್ಟಿ , ಅಣಿ ಕಟ್ಟಿ ನರ್ತಿಸುವುದು ಸಾಮಾನ್ಯವಾಗಿದೆ. ಈ ರೀತಿ ನಡೆದರೆ ಇನ್ನು ಮುಂದೆ ಈ ತುಳುನಾಡಿನ ಸಂಸ್ಕೃತಿ ಯಾವ ಕಡೆ ಹೋಗಬಹುದು. ಇದರ ಪರಿಣಾಮ ಊಹಿಸಲು ಅಸಾಧ್ಯ. ಆದ್ದರಿಂದ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ವೇದಿಕೆಗಳಲ್ಲಿ ದೈವ ವೇಷವನ್ನು ನಿಷೇಧಿಸಿ ಮತ್ತು ಇದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಮತ್ತು ದೈವಾರಾಧನೆ ಮತ್ತು ದೈವ ನರ್ತಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here