ನೆಲ್ಯಾಡಿ: ಇನ್ಫೆಂಟ್ ಜೀಸಸ್ ಚರ್ಚ್ ನೆಲ್ಯಾಡಿ ಇದರ ಮುಂದಾಳತ್ವದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.11ರಂದು ಮಾದೇರಿ ಸೈಂಟ್ ಜೋಸೆಫ್ಸ್ ಪ್ರಶಾಂತ್ ನಿವಾಸ್(ಆಶ್ರಮ)ದಲ್ಲಿ ನಡೆಯಿತು.
ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ಫಾ.ವಿನ್ಸೆಂಟ್ ಡಿ.ಸೋಜ, ಖ್ಯಾತ ಚರ್ಮರೋಗ ತಜ್ಞ ಡಾ.ರೋಶಾಲ್ ಮೊಂತೇರೋ, ಕನ್ನಡಕ ವಿತರಕರಾದ ರೋನಲ್ಡ್ ಫ್ರಾನ್ಸಿಸ್ ಕುಲಾಸೊ, ನೆಲ್ಯಾಡಿ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ಸಿಸ್ಟರ್ ತೆರೆಜಾ ಜೋನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಥೋಮಸ್ ಡಿ.ಸೋಜ, ಕಾರ್ಯದರ್ಶಿ ಸಂದೇಶ್ ಡಿ.ಸೋಜ, ಚರ್ಚ್‌ನ ಎಲ್ಲಾ ಸಂಘಟನೆಯ ಸಂಯೋಜಕಿ ಮೇರಿ ಡಿ.ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂದೇಶ್ ಡಿ.ಸೋಜ ಸ್ವಾಗತಿಸಿ, ಅವಿನಾಶ್ ಡಿ,ಸೋಜ ವಂದಿಸಿದರು. ಜಾನ್ ಮೊಂತೆರೋ ನಿರೂಪಿಸಿದರು. ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸಹಕರಿಸಿದರು.
ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಡೆದ ಶಿಬಿರದಲ್ಲಿ ಜನರಲ್ ಮೆಡಿಸಿನ್, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಮೂಳೆ ರೋಗ ಚಿಕಿತ್ಸೆ, ದಂತ ಚಿಕಿತ್ಸೆ ನೀಡಲಾಯಿತು. ರಕ್ತದೊತ್ತಡ, ಡಯಾಬಿಟಿಸ್, ಇ.ಸಿ.ಜಿ, ಮಾಡಲಾಯಿತು.