ಪೆರಾಬೆ: ಶ್ರೀ ಶಾರದಾ ಭಜನಾ ಮಂದಿರ ಕುಂತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕುಂತೂರು-ಪೆರಾಬೆ ಒಕ್ಕೂಟದ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಐ ಮಿತ್ರ 2.5ಎನ್‌ವಿಜಿ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಇವರ ಸಹಕಾರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಕುಂತೂರು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕುಶಾಲಪ್ಪ ಗೌಡ ಅನ್ನಡ್ಕ ಉದ್ಘಾಟಿಸಿ ಶುಭಹಾರೈಸಿದರು. ಡಾ.ಮಧುಚಂದ್ರರವರು ಕಣ್ಣಿನ ಸ್ವಚ್ಛತೆಯ ಬಗ್ಗೆ, ಕಣ್ಣಿನ ಮಹತ್ವ, ಕೆಂಗಣ್ಣು, ಪೊರೆ ಹಾಗೂ ಕನ್ನಡಕ ಬಳಸುವ ಬಗ್ಗೆ ಮಾಹಿತಿ ನೀಡಿದರು. ಕುಂತೂರು ಒಕ್ಕೂಟದ ಅಧ್ಯಕ್ಷ ಮೋಹನ ಶೆಟ್ಟಿ ಕೇವಳಪಟ್ಟೆ, ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ, ಕುಂತೂರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಬಾಣಬೆಟ್ಟು, ಕುಂತೂರು ಸೇವಾಪ್ರತಿನಿಧಿ ಸವಿತಾ, ಪೆರಾಬೆ ಸೇವಾಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಕೇವಳಪಟ್ಟೆ, ಶ್ರೀ ಶಾರದಾ ಭಜನಾ ಮಂಡಳಿ ಕಾರ್ಯದರ್ಶಿ ಅಶೋಕ ರೈ ಗಾಣಜಾಲು, ಕುಂತೂರು ಒಕ್ಕೂಟದ ಕೋಶಾಧಿಕಾರಿ ಅಶೋಕ ರೈ ಉಪಸ್ಥಿತರಿದ್ದರು. ಕುಂತೂರು ಸುವಿಧಾ ಸಹಾಯಕ ಚೆನ್ನಕೇಶವ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಮತಾ ಅಂಬರಾಜೆ ವಂದಿಸಿದರು.