ಪುತ್ತೂರು: ಕುರಿಯ ಗ್ರಾಮದ ಇಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ ಧ್ವಜಾರೋಹಣ, ಪ್ರಶಸ್ತಿ ಪ್ರದಾನ ಹಾಗೂ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಮುಂಡೂರು ಸ.ಉ. ಹಿ ಪ್ರಾ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಂಸ್ಕೃತಿಕ ಸಂಜೆ, ಸಭಾ ಕಾರ್ಯಕ್ರಮ ದ. 9 ರಂದು ಜರಗಿತು. ಬೆಳಿಗ್ಗೆ ಧ್ವಜಾರೋಹಣವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣರವರು ನೆರವೇರಿಸಿ ಮಾತನಾಡಿ ಶುಭಹಾರೈಸಿದರು.
ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಿಗೆ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿರವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅಥಿತಿಗಳಾಗಿ ಪಂಚಾಯತ್‌ಸದಸ್ಯರಾದ ರೇವತಿ, ನೇಮಾಕ್ಷ ಸುವರ್ಣ, ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಎಸ್.ಅರ್, ವಿಜಯ ಬ್ಯಾಂಕ್‌ನ ನಿವೃತ್ತ ಮೇನೇಜರ್ ಜಯರಾಮ ರೈ ನುಳಿಯಾಲು, ಪುತ್ತೂರು ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಅರವಿಂದ ಭಗವಾನ್ ರೈ, ಇಡಬೆಟ್ಟು ಶಾಲಾ ಸ್ಥಾಪಕಾಧ್ಯಕ್ಷ ಇಬ್ರಾಹಿಂ ಹಾಜಿ ಇಡಬೆಟ್ಟು, ದಾನಿಗಳಾದ ಮಂಜಪ್ಪ ಪೂಜಾರಿ ಮಾಣಿಜಾಲು, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ ಜಿ, ಪ್ರಸಾದ್ ಹೆಬ್ಬಾರ್ ಕರೆಜ್ಜ, ಇಡಬೆಟ್ಟು ಸೂರ್ಯ ಯುವಕ ಮಂಡಲದ ಉಪಾಧ್ಯಕ್ಷ ಈಶ್ವರ ಗೌಡ ಕಟ್ಟದಬೈಲ್, ಅಹ್ಮದ್ ಇಡಬೆಟ್ಟು, ಅಮ್ಮುಂಜ ರಹ್ಮಾನಿಯ ಮದ್ರಸದ ಮಾಜಿ ಅಧ್ಯಕ್ಷ ಇಬ್ರಾಹಿಂ ಎ ಅಮ್ಮುಂಜ, ಮಾಣಿಜಾಲು ಚಿದಾನಂದ ಶೆಟ್ಟಿ, ಕೊಡಿಂಬಾಡಿ ಶಾಲಾ ನಿವೃತ್ತ ಮುಖ್ಯ ಗುರು ಯಶೋಧಾ ಕೆ.ಎಸ್, ಕೋಡಿಂಬಾಡಿ ಶಿಕ್ಷಣ ಸಂಯೋಜಕಿ ಅಮೃತಕಲಾ, ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಶಶಿಕಲಾ ಆಗಮಿಸಿದ್ದರು. ಮಧ್ಯಾಹ್ನದ ಬಳಿಕ ಮುಂಡೂರು ಸ.ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ಇಡಬೆಟ್ಟು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ, ಇಡಬೆಟ್ಟು ಸೂರ್ಯ ಯುವಕ ಮಂಡಲ, ಜೈ ಭಾರತ್ ಅಮ್ಮುಂಜ, ಶ್ರೀ ರಾಮಾಂಜನೆಯ ಫ್ರೆಂಡ್ಸ್ ಇಡಬೆಟ್ಟು, ಷಣ್ಮುಖ ಸ್ವಸಹಾಯ ಸಂಘ ಇಡಬೆಟ್ಟು, ವೈಶಾಲಿ ಸ್ವಸಹಾಯ ಸಂಘ ಇಡಬೆಟ್ಟು, ಶ್ರೀನಿಧಿ ಸ್ವಸಹಾಯ ಸಂಘ ಇಡಬೆಟ್ಟು, ಶ್ರೀ ರಾಮಾಂಜನೇಯ ಪ್ರಗತಿಬಂಧು ಸಂಘ ಇಡಬೆಟ್ಟು, ಧನಲಕ್ಷ್ಮೀ ಪ್ರಗತಿಬಂಧು ಸಂಘ ಇಡಬೆಟ್ಟು, ಸೂರ್ಯ ಪ್ರಗತಿಬಂಧು ಸಂಘ, ಶ್ರೀಮಂಜುನಾಥ ಪ್ರಗತಿಬಂಧು ಸಂಘ, ಶಿವನೇತ್ರ ಪ್ರಗತಿಬಂಧು ಸಂಘ, ಶ್ರೀ ಮಂಜುನಾಥ ಪ್ರಗತಿಬಂಧು ಸಂಘ, ಅಂಗನವಾಡಿ ಕೇಂದ್ರ ಇಡಬೆಟ್ಟು, ಶ್ರೀ ದುರ್ಗಾ ಸ್ತ್ರೀಶಕ್ತಿ ಸಂಘ ಇಡಬೆಟ್ಟು, ಶ್ರೀ ಲಕ್ಷ್ಮೀ ಸ್ರ್ತೀಶಕ್ತಿ ಸಂಘ ಇಡಬೆಟ್ಟು. ಗ್ರಾಮೀಣ ಕೂಟ ಇಡಬೆಟ್ಟು, ಕಾಮದೇನು ನವೋದಯ ಸ್ವಸಹಾಯ ಸಂಘ ಪರಂಕೀಲು, ಪ್ರಕೃತಿ ಒಕ್ಕಲಿಗ ಸ್ವಸಹಾಯ ಸಂಘ ಕರೆಜ್ಜ, ಶ್ರೀರಕ್ಷ ನವೋದಯ ಸ್ವಸಹಾಯ ಸಂಘ ಇಡಬೆಟ್ಟು, ಶ್ರೀ ನಂದಾದೀಪ ನವೋದಯ ಸ್ವಸಹಾಯ ಸಂಘ ಇಡಬೆಟ್ಟು, ವಿಶ್ವಾಸ್ ಹಾರ್ಡ್‌ವೇರ್ ಪುರುಷರಕಟ್ಟೆ, ಭಾಗ್ಯೋದಯ ಇಂಡಸ್ಟ್ರೀಸ್ ಮುಕ್ವೆ, ಶಿವ ಗೋರಕ್ಷನಾಥ ಪ್ರಗತಿ ಬಂಧು ತಂಡ ಪುರುಷರಕಟ್ಟೆರವರು ಸಹಕರಿಸಿದರು. ಸಂಜೆ ಅಂಗನವಾಡಿ ಪುಟಾಣಿಗಳಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಇಡಬೆಟ್ಟು ಶಾಲೆಯಿಂದ ವರ್ಗಾವಣೆಗೊಂಡ ನೀನಾ ಕುವೆಲ್ಲೋ, ಯಶೋದಾ ಹಾಗೂ ವಿಶಾಲಾಕ್ಷಿರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣರಾಜ ವೈಲಾಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಇಡಬೆಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅದ್ರಾಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿಡೆಕಲ್ಲು ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹರೀಶ್ ನಾಯಕ್ ಎನ್. ಸುಳ್ಯ ಸ,ಪ,ಪೂ ಕಾಲೇಜಿನ ಉಪನ್ಯಾಸಕ ಅಬ್ದುಲ್ ಸಮದ್ ನೆಕ್ಕರೆ, ಇಡಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ನಾಸಿರ್ ಇಡಬೆಟ್ಟು, ಶಿವಮೊಗ್ಗದ ಶಿಕ್ಷಕ ದಿನೇಶ್ ಎನ್.ಕೆ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಆರ್.ಎಸ್, ಮುಕ್ವೆ ಭಾಗ್ಯೋದಯ ಇಂಡಸ್ಟ್ರೀಸ್ ನ ಮಾಲಕ ರವಿ ಎಂ. ನಿವೃತ್ತ ಮುಖ್ಯ ಗುರುಗಳಾದ ಶಾಂತಕುಮಾರಿ ಎನ್. ಕೆಮ್ಮಿಂಜೆ ಸ.ಉ.ಹಿ.ಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕಸ್ತೂರಿ, ಅಮ್ಮುಂಜ ಶಾಲಾ ಹಿರಿಯ ವಿದ್ಯಾರ್ಥಿ ವಿಶ್ವಜಿತ್ ಅಮ್ಮುಂಜ, ಮಾಜಿ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ ನೀಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ರವಿ ಎಂ. ಇಡಬೆಟ್ಟುರವರು ವಿಸ್ತರಣೆ ಮಾಡಿಕೊಟ್ಟ ಆಟದ ಮೈದಾನವನ್ನು ನೇಮಾಕ್ಷ ಸುವರ್ಣರವರು ಉದ್ಘಾಟಿಸಿದರು. ಸ್ಮಾರ್ಟ್ ಕ್ಲಾಸಿನ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್ ನೆರವೇರಿಸಿದರು. ಕೊನೆಗೆ ಕಾಪಿಕಾಡು ತಂಡದವರಿಂದ ನಾಯಿದ ಬೀಲ’ ತುಳು ನಾಟಕ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದಲ್ಲಿ ದಾನಿಗಳನ್ನು, ಶಿಕ್ಷಕರನ್ನು ಹಾಗೂ ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಬೆಳ್ಳಾರೆ ಕೆಸಿಎಸಿ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಮತ್ತು ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಭಾರ ಮುಖ್ಯಗುರು ದೇವಪ್ಪ ಎಂ. ಮತ್ತು ಸಮದ್ ಸ್ವಾಗತಿಸಿದರು. ವಿಶಾಲಾಕ್ಷಿ ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಇಡಬೆಟ್ಟು ಶಾಲಾ ವಿದ್ಯಾರ್ಥಿ ನಾಯಕ ಮಹಮ್ಮದ್ ಹಾರಿಸ್, ಮತ್ತಿತರರು ಸಹಕರಿಸಿದರು.