ಗೃಹೋತ್ಪನ್ನಗಳ ತಯಾರಕರಿಗೆ ಮತ್ತು ಗ್ರಾಹಕರಿಗೊಂದು ಗುಡ್ ನ್ಯೂಸ್!

0

ಮಂಗಲ್ ಸ್ಟೋರ್‌ನಲ್ಲಿ ಈ ವೀಕೆಂಡ್ ನಡೆಯಲಿದೆ ಮೇಳ!

ಪುತ್ತೂರು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಬಹುವಿಧ ಸಾಮಾಗ್ರಿಗಳ ಮಳಿಗೆ ’ಮಂಗಲ್ ಸ್ಟೋರ್’ನಲ್ಲಿ ಗೃಹೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಡಿ.16, 17 ಮತ್ತು 18ರಂದು ಮಂಗಲ್ ಸ್ಟೋರಿನ ಹೊರ ಆವರಣದಲ್ಲಿ ಗೃಹೋದ್ಯಮ ಉತ್ಪನ್ನಗಳ ಪ್ರದರ್ಶನ, ಮಾಹಿತಿ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ವಿವಿಧ ಗೃಹೋದ್ಯಮಿಗಳು ತಾವು ತಯಾರಿಸುವ ವೈವಿಧ್ಯಮಯ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡಬಹುದಾಗಿದ್ದು, ಗ್ರಾಹಕರು ಒಂದೇ ಸೂರಿನಡಿಯಲ್ಲಿ ತಮಗೆ ಬೇಕಾದ ಗೃಹೋತ್ಪನ್ನಗಳನ್ನು ಸ್ಥಳದಲ್ಲಿಯೇ ಖರೀದಿಸಬಹುದಾದ ಮತ್ತು ಆ ಉತ್ಪನ್ನಗಳ ಕುರಿತಾಗಿ ತಯಾರಕರಲ್ಲಿ ಮಾಹಿತಿಯನ್ನೂ ಪಡೆದುಕೊಳ್ಳುವ ಸದವಕಾಶವನ್ನು ಕಲ್ಪಿಸಲಾಗಿದೆ. ಮನೆಯಲ್ಲೇ ಪರಿಶುದ್ಧವಾಗಿ, ರಾಸಾಯನಿಕ ಮುಕ್ತ ರೀತಿಯಲ್ಲಿ ತಯಾರಿಸಲಾದ ವಿವಿಧ ಬಗೆಯ ತಿಂಡಿ-ತಿನಸುಗಳು, ಮಸಾಲೆ ಐಟಂಗಳು ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಗ್ರಾಹಕರಿಗೆ ಈ ಮೇಳದಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ.

ಗೃಹೋಪಯೋಗಿ ಉತ್ಪನ್ನಗಳ ತಯಾರಕರು ತಮ್ಮ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಈ ಮೇಳದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಅಭಿಷೇಕ್ ಅವರನ್ನು (8136960858) ಸಂಪರ್ಕಿಸಬಹುದಾಗಿದೆ.

ಒಟ್ಟಿನಲ್ಲಿ ಪುತ್ತೂರು ಮತ್ತು ಆಸುಪಾಸಿನ ಗೃಹೋಪಯೋಗಿ ಉತ್ಪನ್ನಗಳ ತಯಾರಕರನ್ನು ಒಂದೇ ಸೂರಿನಡಿಯಲ್ಲಿ ತಂದು ಗ್ರಾಹಕರಿಗೆ ಅವರಿಷ್ಟದ ಉತ್ಪನ್ನಗಳು ಅವರು ಬಯಸಿದ ಬೆಲೆ ಮತ್ತು ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವುದು ಈ ಮೇಳದ ಪ್ರಮುಖ ಉದ್ದೇಶವಾಗಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here