ಕೆಪಿಸಿಸಿ ಚುನಾವಣಾ ಸಮಿತಿ ರಚನೆ : ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್‌ಗೆ ಸ್ಥಾನ 

0

 

ಟಿಕೆಟ್ ಹಂಚಿಕೆ ವಿಚಾರದಲ್ಲಿ, ಅಭ್ಯರ್ಥಿತನಕ್ಕೆ ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಲಿರುವ ಕೆಪಿಸಿಸಿ ಚುನಾವಣಾ ಸಮಿತಿ ಪ್ರತಿ ಕ್ಷೇತ್ರಕ್ಕೆ ಕನಿಷ್ಠ 1ರಿಂದ ಗರಿಷ್ಠ 3 ಮಂದಿ ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡಿ ಪಕ್ಷದ ಹೈಕಮಾಂಡ್‌ಗೆ
ಕಳುಹಿಸಲಿದೆ. ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ.

 

ಪುತ್ತೂರು: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಟಿಕೆಟ್ ಹಂಚಿಕೆ, ಚುನಾವಣಾ ಚಟುವಟಿಕೆಗಳ ನಿರ್ವಹಣೆಗಾಗಿ 36 ಮಂದಿ ಪ್ರಮುಖರನ್ನೊಳಗೊಂಡಿರುವ ಕೆಪಿಸಿಸಿ ಚುನಾವಣಾ ಸಮಿತಿರಚಿಸಿ ಎಐಸಿಸಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.ಒಂದೆರಡು ದಿನಗಳಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಖರ್ಗೆ ತಿಳಿಸಿದ್ದರು.ಇದೀಗ ಕೆಪಿಸಿಸಿ ಚುನಾವಣಾ ಸಮಿತಿ ರಚಿಸಿ ಎಐಸಿಸಿ ಆದೇಶ ಹೊರಡಿಸಿದೆ.
ಈ ಸಮಿತಿಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರಿಗೂ ಸ್ಥಾನ ನೀಡಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ,ಕೆಪಿಸಿಸಿ ಕಾರ್ಯಾಧ್ಯಕ್ಷರು, ಹಿರಿಯ ನಾಯಕರು ಸೇರಿ 36 ಮಂದಿ ಇದ್ದಾರೆ. ಯುವ ಕಾಂಗ್ರೆಸ್, ಎನ್‌ಎಸ್ ಯುಐ, ಮಹಿಳಾ ಕಾಂಗ್ರೆಸ್, ಸೇವಾದಳ ಹಾಗೂ ರಾಷ್ಟಿçÃಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸಮಿತಿಯಲ್ಲಿ ಇದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು, ಸುಳ್ಯ,ಬೆಳ್ತಂಗಡಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಅವಕಾಶ ಕೋರಿ ಈಗಾಗಲೇ ಹಲವು ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.ಪುತ್ತೂರು ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿತನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಕಾರ್ಯನಿರ್ವಹಿಸಲಿದೆ. ಕಾಂಗ್ರೆಸ್ ಟಿಕೆಟ್ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಈ ಸಮಿತಿ ಪರಿಶೀಲನೆ ಮಾಡಿ ಹೈಕಮಾಂಡ್‌ಗೆ ಕಳುಹಿಸಲಿದೆ.ಕಾಂಗ್ರೆಸ್ ಚುನಾವಣಾ ಚಟುವಟಿಕೆಗಳ ತೀರ್ಮಾನವನ್ನು ಈ ಸಮಿತಿ ಮಾಡಲಿದೆ.ಅತಿ ಪ್ರಮುಖವಾದ ಈ ಸಮಿತಿಯಲ್ಲಿ ಕೆಲವು ನಾಯಕರಿಗೆ ಅವಕಾಶ ಸಿಕ್ಕಿಲ್ಲ ಎಂಬುದು ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ.ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಹಲವು ಹಿರಿಯರಿಗೆ ಅವಕಾಶ ಸಿಗದೇ ಇರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಸೊರಕೆ, ಯು.ಟಿ.ಖಾದರ್‌ಗೆ ಅವಕಾಶ: ಕೆಪಿಸಿಸಿ ಚುನಾವಣಾ ಸಮಿತಿಯಲ್ಲಿ ಪುತ್ತೂರಿನ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಕಡಬ ಮೂಲದವರಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಅವರಿಗೂ ಅವಕಾಶ ನೀಡಲಾಗಿದೆ.ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದರೂ ಆಗಿರುವ ವಿನಯ ಕುಮಾರ್ ಸೊರಕೆ ಅವರು ಸಿದ್ಧರಾಮಯ್ಯ ಅವರ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.ಯು.ಟಿ.ಖಾದರ್ ಅವರೂ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಚುನಾವಣಾ ಸಮಿತಿಯಲ್ಲಿರುವ ಇತರ ಪ್ರಮುಖರು: ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯ,ಬಿ.ಕೆ.ಹರಿಪ್ರಸಾದ್,ಎಂ.ಬಿ.ಪಾಟೀಲ್,ದಿನೇಶ್ ಗುಂಡೂರಾವ್,ಹೆಚ್.ಕೆ.ಪಾಟೀಲ್,ಕೆ.ಹೆಚ್.ಮುನಿಯಪ್ಪ,ವೀರಪ್ಪ ಮೊಯ್ಲಿ,ಡಾ|ಜಿ.ಪರಮೇಶ್ವರ್,ಆರ್.ವಿ.ದೇಶಪಾಂಡೆ,ಅಲ್ಲಮ್ ವೀರಭದ್ರಪ್ಪ,ರಾಮಲಿಂಗ ರೆಡ್ಡಿ,ಈಶ್ವರ್ ಖಂಡ್ರೆ,ಸತೀಶ್ ಜಾರಕಿಹೊಳಿ,ಧ್ರುವ ನಾರಾಯಣ್,ಸಲೀಂ ಅಹ್ಮದ್,ರೆಹಮಾನ್ ಖಾನ್,ಮಾರ್ಗರೆಟ್ ಆಳ್ವಾ,ಕೆ.ಜೆ.ಜಾರ್ಜ್, ಕೆ.ಗೋವಿಂದರಾಜ್,ಹೆಚ್.ಸಿ.ಮಹದೇವಪ್ಪ, ಚೆಲುವರಾಯ ಸ್ವಾಮಿ,ಬಸವರಾಜ್ ರಾಯರೆಡ್ಡಿ,ಬಿ.ಕೆ.ಸುರೇಶ್,ಎಲ್.ಹನುಮಂತಯ್ಯ,ನಾಸಿರ್ ಹುಸೇನ್,ಎಂ.ಆರ್.ಸೀತಾರಾಮ್,ಶಿವರಾಜ್ ತಂಗಡಗಿ,ವಿನಯ್ ಕುಲಕರ್ಣಿ,ವಿ.ಎಸ್.ಉಗ್ರಪ್ಪ,ಬೋಸ್ ರಾಜ್,ಶರಣಪ್ಪ ಜಿ ಪದ್ಮಾವತಿ,ಶಾಮನೂರ್ ಶಿವಶಂಕರಪ್ಪ, ಜಿಸಿ ಚಂದ್ರಶೇಖರ್.

LEAVE A REPLY

Please enter your comment!
Please enter your name here