ಕಕ್ಕೂರು: ಕಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಅಶ್ವಿತ್, ತನ್ನ ಹುಟ್ಟು ಹಬ್ಬದ ಪ್ರಯುಕ್ತ ತಾನು ವಿದ್ಯಾರ್ಜನೆ ಮಾಡುತ್ತಿರುವ ಶಾಲೆಗೆ ಒಂಭತ್ತು ಬೆಂಚನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಗುವಿನ ಪೋಷಕರಾದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರವಿಕಲಾ, ತಾರನಾಥ್ ಕೋಡಿ ದಂಪತಿ ಸುಮಾರು 12,000 ಮೌಲ್ಯದ 9 ಬೆಂಚುಗಳನ್ನು ಕೊಡುಗೆಯಾಗಿ ಶಾಲೆಗೆ ನೀಡಿದರು. ಈ ವೇಳೆ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಬಳಿಕ ರವಿಕಲಾ ತಾರನಾಥ್ ದಂಪತಿಯನ್ನು ಶಾಲಾ ಹಾಗೂ ಎಸ್‌ಡಿಎಂಸಿ ಮತ್ತು ವಿದ್ಯಾರ್ಥಿಗಳ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.