ಕುಂಬ್ರ ಸುಶಾ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ

0

ಪುತ್ತೂರು: ಕುಂಬ್ರ ನ್ಯೂ ಪ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಾ ಡ್ರೆಸ್ಸಸ್, ಫ್ಯಾನ್ಸಿ ಮತ್ತು ಸ್ಟೇಷನರಿ ಇದರ ಮಾಲಕರಾದ ಸುರೇಶ್ ಕುಮಾರ್ ತಿಂಗಳಾಡಿ ಇವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಹೆಸರಿನಲ್ಲಿ ನೀಡುತ್ತಿರುವ 10 ನೇ ವರ್ಷದ ಸುಶಾ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ದ.7 ರಂದು ನಡೆದ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೀಡಲಾಯಿತು. 1 ರಿಂದ 7 ನೇ ತರಗತಿ ವಿಭಾಗದಲ್ಲಿ ವಿಶಾಲ್ ಕೆ.ಎ, 7 ರಿಂದ 10 ನೇ ತರಗತಿ ವಿಭಾಗದಲ್ಲಿ ಮುಹಮ್ಮದ್ ಮಸೂದ್, ಪದವಿಪೂರ್ವ ವಿಭಾಗದಲ್ಲಿ ಆಯಿಷತ್ ಮಝೀನಾರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸ್ಮರಣಿಕೆ ಹಾಗೂ ನಗದನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸೇರಿದಂತೆ ಗ್ರಾಪಂ ಸದಸ್ಯರುಗಳು, ವಿವಿಧ ಗಣ್ಯರು, ಪ್ರಾಂಶುಪಾಲ ಗೋಪಾಲಕೃಷ್ಣ ಉಪಾಧ್ಯಾಯ, ಉಪ ಪ್ರಾಂಶುಪಾಲೆ ಮಮತಾ ಕೆಎಸ್, ಮುಖ್ಯಗುರು ನೀನಾ ಕುವೆಲ್ಲೋ ಹಾಗೂ ಶಿಕ್ಷಕ ವೃಂದದವರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here