ಅಂಬಟೆಮೂಲೆಯಲ್ಲಿ ಟಿಸಿ ಬಳಿ ವಿದ್ಯುತ್ ಆಘಾತ : ಪ್ರೌಢಶಾಲಾ ವಿದ್ಯಾರ್ಥಿ ರಂಜಿತ್ ಸಾವು

0

ಪುತ್ತೂರು: ವಿದ್ಯುತ್ ಆಘಾತಕ್ಕೊಳಗಾಗಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬಡಗನ್ನೂರು ಅಂಬಟೆಮೂಲೆ ಎಂಬಲ್ಲಿ ದ.೧೭ರಂದು ಸಂಜೆ ಸಂಭವಿಸಿದೆ.
ಬಡಗನ್ನೂರು ಗ್ರಾಮ ಪಂಚಾಯತ್‌ನಲ್ಲಿ ನೀರು ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದ ಅಂಬಟೆಮೂಲೆ ಕೃಷ್ಣಪ್ಪ ನಾಯ್ಕ್‌ರವರ ಮಗ, ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ರಂಜಿತ್ (16ವ.)ಮೃತಪಟ್ಟವರು.ರಂಜಿತ್ ಅವರು ತಮ್ಮ ಮನೆಯಿಂದ ಸುಮಾರು ೨೦೦ ಮೀ.ದೂರದಲ್ಲಿರುವ ಟ್ರಾನ್ಸ್-ರ್ಮರ್ ಬಳಿ ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದಿದ್ದರು.ಆಸ್ಪತ್ರೆಗೆಂದು ಕರೆತರುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ನೆರೆಯ ನಿವಾಸಿ ಸ್ನೇಹಿತನೋರ್ವ ತನ್ನ ಮನೆಗೆ ಕರೆಂಟ್ ಇಲ್ಲ ಎಂದು ಹೇಳಿ ಪರಿಶೀಲಿಸಲೆಂದು ರಂಜಿತ್ ಅವರನ್ನು ವಿದ್ಯುತ್ ಟ್ರಾನ್ಸ್ ಫರ್ಮರ್ ಬಳಿಗೆ ಕರೆದೊಯ್ದಿದ್ದರು ಎನ್ನಲಾಗುತ್ತಿದೆ.ಆದರೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಕೃಷ್ಣಪ್ಪ ನಾಯ್ಕ ಮತ್ತು ಶಾರದಾ ದಂಪತಿ ಕೂಲಿ ಕಾರ್ಮಿಕರಾಗಿದ್ದು ಹೃದಯಸಂಬಂಽ ಕಾಯಿಲೆಯಿಂದ ಬಳಲುತ್ತಿರುವ ಕೃಷ್ಣಪ್ಪ ನಾಯ್ಕ್ ಅವರಿಗೆ ಇದೇ ೨೦ರಂದು ಬೈಪಾಸ್ ಸರ್ಜರಿಗೆ ಸಿದ್ಧತೆ ನಡೆಸಲಾಗಿತ್ತು.ಈ ನಡುವೆ ಮಗ ರಂಜಿತ್ ವಿಧಿಲೀಲೆಗೆ ಬಲಿಯಾಗಿದ್ದು ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.ಮೃತ ರಂಜಿತ್‌ರವರು ತಂದೆ,ತಾಯಿ ಹಾಗೂ ಕಾಲೇಜು ಓದುತ್ತಿರುವ ಅಣ್ಣನನ್ನು ಅಗಲಿದ್ದಾರೆ. ಸಂಪ್ಯ ಪೊಲೀಸರು ಹಾಗೂ ಮೆಸ್ಕಾಂ ಅಽಕಾರಿಗಳು, ಗ್ರಾಮ ಪಂಚಾಯತ್ ಸದಸ್ಯ ಲಿಂಗಪ್ಪ ಗೌಡ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here