





ಪುತ್ತೂರು: 2019ರಲ್ಲಿ ಕಡಬದಲ್ಲಿ ನಡೆದ ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋವಾ ಕಾರು ಚಾಲಕ ಪ್ರಶಾಂತ್ ಮತ್ತು ಮಾಲಕ ಅರುಣ್ ಕುಮಾರ್ ಪುತ್ತಿಲ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ.








2019ರಲ್ಲಿ ಸೆ.9ರಂದು ಅರುಣ್ ಕುಮಾರ್ ಪುತ್ತಿಲ ಅವರ ಮಾಲಕತ್ವದ ಇನ್ನೋವ ಕಾರನ್ನು ಚಾಲಕ ಪ್ರಶಾಂತ್ ಎಂಬವರು ಚಲಾಯಿಸಿಕೊಂಡು ಕಡಬ ತಾಲೂಕಿನ ಐತ್ತೂರು ಗ್ರಾಮದ ನೆಟ್ಟಣ ಎಂಬಲ್ಲಿ ತಲುಪಿದಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮತಿ (4೦ವ) ಎಂಬವರಿಗೆ ಕಾರು ಡಿಕ್ಕಿಯಾಗಿತ್ತು. ಘಟನೆಯಿಂದ ಗಾಯಗೊಂಡ ಸುಮತಿ ಅವರು ಚಿಕಿತ್ಸೆಗೆ ಸ್ಪಂದಿಸದೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ಕಾರನ್ನು ಚಾಲಕ ನಿಲ್ಲಿಸದೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದೇ ಪೊಲೀರಿಗೂ ಮಾಹಿತಿ ನೀಡದೆ ಕಾರು ಸಮೇತ ಪರಾರಿಯಾಗಿರುವ ವಿಚಾರದಲ್ಲಿ ಕಡಬ ಪೊಲೀಸರು ಆರೋಪಿ ವಿರುದ್ಧ ಪುತ್ತೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಚಾಲಕ ಪ್ರಶಾಂತ್ ಮತ್ತು ಕಾರಿನ ಮಾಲಕ ಅರುಣ್ ಕುಮಾರ್ ಪುತ್ತಿಲ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿಗಳ ಪರ ವಕೀಲರಾದ ದೇವಾನಂದ ಕೆ, ಚಿನ್ಮಯ್ ರೈ ಈಶ್ವರಮಂಗಲ ಮತ್ತು ಹರಿಣಿ ವಾದಿಸಿದರು.



