ಪುತ್ತೂರು : ಮೂಡಬಿದ್ರೆಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಹೊರ ಕಾಣಿಕೆ ಹಸ್ತಾಂತರಿಸುವ ಕಾರ್ಯಕ್ರಮ ಸುದಾನ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ಡಿ.18ರಂದು ಜರಗಿತು.
ನಗರಸಭೆ ಅಧ್ಯಕ್ಷ ಜೀವಂದರ್ ಜೈನ್ ಇವರು ಹಸಿರು ಬಾವುಟದ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ರೆ|ವಿಜಯ ಹಾರ್ವಿನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಧ್ಯಕ್ಷ ಶ್ರೀಧರ್ ರೈ ,ಎಡಿಸಿ ಜಯಮಾಲಾ, ಉಮಾ ಪ್ರಸನ್ನ, ಸ್ಕೌಟ್ ಗೈಡ್ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ .ಗೈಡ್ ಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.ಜೊತೆ ಕಾರ್ಯದರ್ಶಿ ಎಲ್.ಟಿ ಗೈಡ್ ಸುನಿತಾ ಎಂ ಧನ್ಯವಾದ ಸಲ್ಲಿಸಿದರು.
ಹೊರೆ ಕಾಣಿಕೆಯಾಗಿ 3ಟನ್ ಗಿಂತ ಮೇಲ್ಪಟ್ಟು ಅಕ್ಕಿ, 5 ಸಾವಿರಕ್ಕಿಂತ ಮೇಲ್ಪಟ್ಟು ತೆಂಗಿನ ಕಾಯಿ, ಒಂದು ಗೋಣಿ ಬೆಲ್ಲ,400 ಕೆ.ಜಿ ಗಿಂತಲು ಹೆಚ್ಚುಸೌತೆಕಾಯಿ, ಕುಂಬಳಕಾಯಿ, ಚೀನಿಕಾಯಿ, ಮುಂಡಿ ಹೀಗೆ ಬೇರೆ ಬೇರೆ ತರಕಾರಿಗಳು ಸಂಗ್ರಹವಾಗಿದ್ದವು.
ಈ ಹೊರೆಕಾಣಿಕೆಯನ್ನು ಮೂಡಬಿದ್ರೆಯ ಆಳ್ವಾಸ್ ಕ್ಯಾಂಪಸ್ ಗೆ ತಲುಪಿಸಲಾಯಿತು.