ಪುತ್ತೂರು:ಮೈಸೂರಿನ ಬಿಎಸ್ಎನ್ಎಲ್ ಇಲಾಖೆಯಲ್ಲಿ , ಸೀನಿಯರ್ ಸೂಪವೈಸರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿಗೊಂಡಿದ್ದ , ದರ್ಬೆ ಕಾವೇರಿಕಟ್ಟೆ ಶೆಟ್ಟಿ ಜನರೇಟರ್ ಮಾಲಕ ಪಿ.ಗೋವರ್ಧನ ಶೆಟ್ಟಿಯವರ ಮಾವ ಎಂ.ಕೆ.ತಂಗರಾಜನ್(88)
ಅಲ್ಪಕಾಲದ ಅನಾರೋಗ್ಯ ದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯ ಲ್ಲಿ ಡಿ.17 ರಂದು ನಿಧನರಾದರು.
ತಮ್ಮ ನಿವೃತ್ತಿ ನಂತರ ದರ್ಬೆ ಕಾವೇರಿಕಟ್ಟೆಯಲ್ಲಿರುವ ಮಗಳು ಶುಭ ಗೋವರ್ಧನ್ ಜೊತೆಯಲ್ಲೇ ವಾಸವಿದ್ದರು. ಮೃತರು ಮಕ್ಕಳಾದ ಮಧು ಮೋಹನ್ ರಾಜ್ ,ಮಥಿನ್ ಮೋಹನ್ ರಾಜ್, ಮನ ಮೋಹನ್ ರಾಜ್ ಹಾಗೂ ಶುಭ ಗೋವರ್ಧನ್ ಸಹಿತ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.