ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ 31 ನೇ ವಾರ್ಷಿಕ ಪ್ರತಿಷ್ಠಾ ಉತ್ಸವ ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ದ. 20 ರಿಂದ 26 ರವರೆಗೆ ನಡೆಯಲಿದೆ.
ದ. 20 ರಂದು ಸಂಜೆ ಉದ್ಘಾಟನೆ ನಡೆಯಲಿದೆ. ರಾತ್ರಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟಿಸಲಿದ್ದಾರೆ.
ಶ್ರೀರಾಮ ಮಂದಿರದ ಅಧ್ಯಕ್ಷ ಜೈ ಶಂಕರ ರೈ ಬೆದ್ರುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಅಕ್ಷಯ ಗ್ರೂಪ್ ಆಫ್ ಕಾಲೇಜಿನ ಚೇರ್‌ಮೆನ್ ಜಯಂತ ನಡುಬೈಲು, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಭಾಗವಹಿಸಲಿದ್ದಾರೆ. ಇದೇ ವೇಳೆ ಸನ್ಯಾಸಿಗುಡ್ಡೆ ಡಾ. ಎಸ್. ಗೋಪಾಲನ್ ಅನುಯಾಯಿ ಸಮಿತಿಯ ಮಾಜಿ ಅಧ್ಯಕ್ಷ ಸೋಮಶೇಖರ ರೈ ಬೆದ್ರುಮಾರ್ ರವರಿಗೆ ಗೌರವಾರ್ಪಣೆ ನಡೆಯಲಿದೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂತ ಫಿಲೋಮಿನಾ ಕಾಲೇಜು ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಭರತ ವೈಭವ’ ನಡೆಯಲಿದೆ.
ದ. 21 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ‘ಅರ್ಧ ಏಕಾಹ ಭಜನೆ’ ನಡೆಯಲಿದೆ.
ದ. 22 ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆಯಲಿದೆ.
ರಾತ್ರಿ ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಕೆದಂಬಾಡಿ ಇವರ 26 ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ಮೇಳದಿಂದ ‘ಬ್ರಹ್ಮಕಪಾಲ’ ಯಕ್ಷಗಾನ ಬಯಲಾಟ ನಡೆಯಲಿದೆ.
ದ. 23 ರಂದು ಸಂಜೆ ‘ಶ್ರೀರಾಮ ಕಲ್ಪೋಕ್ತ ಪೂಜೆ’ ಜರಗಲಿದೆ. ದ. 24 ರಂದು ಭಜನೆ, ದ. 26 ರಂದು ಸ್ಥಳ ಸಾನಿಧ್ಯ ದೈವಗಳಾದ ಶ್ರೀ ಗುಳಿಗ ಮತ್ತು ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಕಾರ್ಯಕ್ರಮಗಳ ದಿನ ಭಜನೆ ಸೇವೆ, ಅನ್ನಸಂತರ್ಪಣೆ ಸೇವೆಗಳು ನಡೆದುಬರಲಿವೆ ಎಂದು ಶ್ರೀರಾಮ ಮಂದಿರದ ಆಡಳಿತ ಸಮಿತಿ ಹಾಗೂ ಶ್ರೀರಾಮ ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ.
ದ. 22 ರಂದು ಶ್ರೀ ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ
ಕೆದಂಬಾಡಿ ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಇವರ 26 ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಬ್ರಹ್ಮಕಪಾಲ’ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ. ಕಟೀಲು ಶ್ರೀ ಮೇಳಗಳ ಈ ವರ್ಷದ ನಿಯಮದಂತೆ ಸಂಜೆ 5.30 ಕ್ಕೆ ಚೌಕಿಪೂಜೆ ನಡೆದು 6 ಗಂಟೆಯಿಂದ 12.30 ರವರೆಗೆ ಯಕ್ಷಗಾನ ನಡೆಯಲಿದೆ.