ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ 11 ನೇ ವರ್ಷದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಹರಕೆ ಬಯಲಾಟ

0

ಪುತ್ತೂರು: ಯಕ್ಷಗಾನ ಕಲೆ ನಿರಂತರವಾಗಿರಬೇಕೆಂಬ ಉದ್ದೇಶದಿಂದ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ದೇವಳದ ಆಡಳಿತ ಮಂಡಳಿ, ಸಿಬಂದಿವರ್ಗ ಮತ್ತು ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ 11 ನೇ ವರ್ಷದ ಬಯಲಾಟವಾಗಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ದ.17ರಂದು ರಾತ್ರಿ ನಡೆಯಿತು.

ಯಕ್ಷಗಾನ ಆರಂಭಕ್ಕೆ ಮೊದಲು ದೇವಳದ ಸಭಾಭವನದ ಒಳಗೆ ಶ್ರೀದೇವಿಯ ಚೌಕಿಪೂಜೆ, ಅನ್ನಸಂತರ್ಪಣೆ ನಡೆಯಿತು.
ಅರ್ಚಕ ವೇ.ಮೂ ವಸಂತ ಕೆದಿಲಾಯ, ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಜಿ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಜ್ಷೆ ಅನಿತಾ ಹೇಮನಾಥ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಡಾ.ಸುರೇಶ್ ಪುತ್ತೂರಾಯ, ತಾಲೂಕು ಪಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈ, ತುಳಸಿ ಕ್ಯಾಟರರ್‍ಸ್‌ನ ಹರೀಶ್ ಭಟ್ ಕೇಪುಳು, ಪುತ್ತೂರು ವಿಜಯ ಶಾಮಿಯಾನದ ಮಂಜುನಾಥ ಭಟ್, ನಗರಸಭಾ ಮಾಜಿ ಸದಸ್ಯ ನವೀನ್‌ಚಂದ್ರ ನಾಕ್ ಬೆದ್ರಾಳ, ಸ್ಯಾಕ್ಸೋಪೋನ್ ವಾದಕ ಡಾ|ಪಿ.ಕೆ.ಗಣೇಶ್ ನೆಲ್ಲಿಕಟ್ಟೆ, ನವೀನ್ ಆಚಾರ್ ಕೃಷ್ಣನಗರ, ನ್ಯಾಯವಾದಿಗಳಾದ ಮಹೇಶ್ ಕಜೆ, ಕವನ್ ನಾಕ್, ಸಿದ್ದನಾಥ್ ಕಂದರೆ, ಅಮರ್ ಲೈಟಿಂಗ್ಸ್‌ನ ರವಿ ನೆಲ್ಲಿಕಟ್ಟೆ, ಡಾ.ಶಶಿಧರ್ ಕಜೆ ಸಹಿತ ದೇವಳದ ಆಡಳಿತ ಮಂಡಳಿ, ಸಿಬ್ಬಂದಿಗಳು ಸೇರಿದಂತೆ ಸಾವಿರಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here