ಪುಣಚ: ಗುಡ್ಡದಲ್ಲಿ ವ್ಯಕ್ತಿಯೋರ್ವರ ಅಸ್ಥಿಪಂಜರ ಪತ್ತೆ

0

ವಿಟ್ಲ: ಗುಡ್ಡಪ್ರದೇಶದಲ್ಲಿರುವ ಹೊಂಡದಲ್ಲಿ ವ್ಯಕ್ತಿಯೋರ್ವರ ಅಸ್ಥಿಪಂಜರ ಹಾಗೂ ಮೊಬೈಲ್ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ನಡೆದಿದೆ.

ಸೊಪ್ಪು, ಸೌದೆ ತರಲು ಗುಡ್ಡಕ್ಕೆ ತೆರಳಿದ ಸ್ಥಳೀಯ ನಿವಾಸಿಗಳಿಗೆ ಒಂದು ಮೊಬೈಲ್ ಫೋನ್ ಹಾಗೂ ಬ್ಯಾಗ್ ಸಿಕ್ಕಿದ್ದು, ಅದನ್ನು ಗಮನಿಸಿದ ಅವರು ಅಕ್ಕಪಕ್ಕ ನೋಡಿದಾಗ  ವ್ಯಕ್ತಿಯೋರ್ವರ ಅಸ್ಥಿಪಂಜರ ಪತ್ತೆಯಾಗಿತ್ತು. ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಅಸ್ತಿಪಂಜರ ನೆಲದಲ್ಲಿ ಬಿದ್ದುಕೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿರುವ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ವ್ಯಕ್ತಿ ಕೆಲದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿ ತನಿಖೆ ನಡೆಸುತ್ತಿದ್ದಾರೆ‌.


LEAVE A REPLY

Please enter your comment!
Please enter your name here