ಧಾರ್ಮಿಕ ಕಲಾಕೃತಿಗಳ, ಅಲಂಕಾರ ಬಿಡಿಭಾಗಗಳ ಸಂಗ್ರಹ ದಿ ಪಾರ್ಟಿ ಹೌಸ್ ಶುಭಾರಂಭ

0

ಪುತ್ತೂರು: ಧಾರ್ಮಿಕ ಕಲಾಕೃತಿಗಳ, ಅಲಂಕಾರ ಬಿಡಿಭಾಗಗಳ ಬೃಹತ್ ಸಂಗ್ರಹವಾಗಿರುವ ದಿ ಪಾರ್ಟಿ ಹೌಸ್ ದ.21 ರಂದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಎದುರುಗಡೆ ಇರುವ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.


ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಂಪ್ರೋಕ್ಷಿಸಿ ಆಶೀರ್ವಚನ ನೀಡುತ್ತಾ ಮಾತನಾಡಿ, ಗುಣಮಟ್ಟದ ಸೇವೆ ನೀಡಿದ್ದಲ್ಲಿ ಸಂಸ್ಥೆಯು ಉತ್ತರೋತ್ತರ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಅನೇಕ ಶಾಖೆಗಳನ್ನು ಹೊಂದುವಂತಾಗಲಿ ಎಂದರು.


ಸಂಸ್ಥೆಯ ಮಾಲಕ ಪ್ರದೀಪ್ ಸಿಕ್ವೇರಾರವರ ತಾಯಿ ರೊಜಿನಾ ಸಿಕ್ವೇರಾ ಹಾಗೂ ಪ್ರದೀಪ್ ರವರ ಕಸಿನ್ ಪ್ರದೀಪ್ ವೇಗಸ್ ರವರ ತಾಯಿ ಸೆವ್ರಿನ್ ವೇಗಸ್ ರವರು ಜೊತೆಗೂಡಿ ರಿಬ್ಬನ್ ಕತ್ತರಿಸಿ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪ್ರಮುಖರಾದ ವಿ.ಜೆ ಫೆರ್ನಾಂಡೀಸ್ ಪಾಂಗ್ಲಾಯಿ, ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಇಂಪೀರಿಯರ್ ಫರ್ನಿಚರ್ ಮಾಲಕಿ ವಾಯಿಲೆಟ್ ಪಿಂಟೋ, ಕ್ಲಾಸಿಕ್ಲಿಕ್ಸ್ ಸ್ಟುಡಿಯೋ ಮಾಲಕ ರೋಶನ್ ಡಾಯಸ್ ಹಾಗೂ ಬಬಿತಾ ಡಾಯಸ್, ಪ್ರದೀಪ್ ವೇಗಸ್(ಬಾಬಾ) ಶಿಂಗಾಣಿ, ಸಿಲ್ವೇಸ್ತರ್ ಗೊನ್ಸಾಲ್ವಿಸ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯಲ್ಲಿ ಧಾರ್ಮಿಕ ಕಲಾಕೃತಿಗಳು, ಅಲಂಕಾರ ಬಿಡಿಭಾಗಗಳು, ವಿವಿಧ ಕಲರಿನ ಬಲೂನ್ಸ್ ಮತ್ತು ರಿಬ್ಬನ್ಸ್, ಕ್ರಿಸ್ಮಸ್ ಗಿಪ್ಟ್ಸ್, ಬರ್ಥ್ ಡೆ ಗಿಪ್ಟ್ ಕಲೆಕ್ಷನ್ಸ್, ಡೆಕೋರೇಶನ್ ಕ್ಲೋತ್ಸ್, ಕ್ಯಾಂಡಲ್ಸ್, ಕೃತಕ ಹೂಗಳು, ಸ್ನೋ ಲೈಟ್ಸ್ ಹೀಗೆ ಅನೇಕ ವಸ್ತುಗಳ ಸಂಗ್ರಹ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ಸಾರ್ವಜನಿಕರು ಆಗಮಿಸಿ ಸಂಸ್ಥೆಯನ್ನು ಪ್ರೋತ್ರಾಹಿಸಬೇಕಾಗಿ ವಿನಂತಿ.
-ಪ್ರದೀಪ್ ಸಿಕ್ವೇರಾ,ಸಂಸ್ಥೆಯ ಮಾಲಕರು

ಚಿತ್ರ: ಕ್ಲಾಸಿಕ್ಲಿಕ್ಸ್ ಪುತ್ತೂರು

LEAVE A REPLY

Please enter your comment!
Please enter your name here