ಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯರಿಗೆ ಶ್ರೀ ಯಕ್ಷಾಂಜನೇಯ ಪ್ರಶಸ್ತಿ : ದ.25ರಂದು ಪ್ರಶಸ್ತಿ ಪ್ರದಾನ

0

ಪುತ್ತೂರು ಬೊಳ್ವಾರು ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘವು ಆಯೋಜಿಸುವ ಶ್ರೀಯಕ್ಷಾಂಜನೇಯ ಪ್ರಶಸ್ತಿಗೆ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ಭಾಜನರಾಗಿದ್ದಾರೆ.

ದ.25 ರಂದು ಸಂಜೆ 5 ಕ್ಕೆ ಜರಗುವ ಶ್ರೀಆಂಜನೇಯ 54 ವಾರ್ಷಿಕ ಕಲಾಪದಲ್ಲಿ ಅಮ್ಮಣ್ಣಾಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.  


ದಿನೇಶ ಅಮ್ಮಣ್ಣಾಯರು ರಸರಾಗ ಚಕ್ರವರ್ತಿ ಬಿರುದಾಂಕಿತ ಭಾಗವತ. ಕೀರ್ತಿಶೇಷ ಭಾಗವತ ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಕರ್ನಾಟಕ ಮೇಳದಲ್ಲಿ ಹೊರಹೊಮ್ಮಿದವರು. ಇಪ್ಪತ್ತೊಂದು ವರುಷ ಕರ್ನಾಟಕ ಮೇಳ ಸೇರಿದಂತೆ ಪುತ್ತೂರು, ಕುಂಟಾರು, ಕದ್ರಿ, ಎಡನೀರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದಾರೆ. ಮಾನಿಷಾದ, ಭಕ್ತ ಸುಧಾಮ, ಪಾಂಚಜನ್ಯ, ಅಕ್ಷಯಾಂಬರ, ಸತ್ಯಹರಿಶ್ಚಂದ್ರ, ನಳದಮಯಂತಿ ಮೊದಲಾದ ಪ್ರಸಂಗಗಳ ಹಾಡುಗಳಲ್ಲಿ ರಸ-ಭಾವಗಳು ಮರುಹುಟ್ಟು ಪಡೆಯುತ್ತವೆ. ತುಳು ಪ್ರಸಂಗಗಳ ರಂಗ ಸಂಭ್ರಮದ ಕಾಲಘಟ್ಟದಲ್ಲಿ ಅಮ್ಮಣ್ಣಾಯರ ಗಾಯನಕ್ಕೆ ಪ್ರತ್ಯೇಕವಾದ ಗಾನಸುಖ. ದಾಮೋದರ ಮಂಡೆಚ್ಚರ ನೆರಳಿನಲ್ಲಿ ಮೇಲ್ಮೆ ಕಂಡ ಇವರ ಗಾಯನ ಮಾರ್ಗವು ಅಮ್ಮಣ್ಣಾಯ ಶೈಲಿಯಾಗಿ ರೂಪುಗೊಂಡಿದೆ ಎಂದು ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here