ಉಪ್ಪಿನಂಗಡಿಯ ಚಂದನ್ ಕುಮಾರ್ ‘ಮಿಸ್ಟರ್ ದಕ್ಷಿಣ ಕನ್ನಡ’

0

ಉಪ್ಪಿನಂಗಡಿ: ಮಿಸ್ಟರ್ ದಕ್ಷಿಣ ಕನ್ನಡ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ತೋರಿದ ಉಪ್ಪಿನಂಗಡಿಯ ಸಮ್ ಸಾಪ್ಲಿಮೆಂಟ್ಸ್ ಆಂಡ್ ಫಿಟ್ನೆಸ್ ಸಂಸ್ಥೆಯ ಹಾಗೂ ಬಾಲುಸ್ ಜಿಮ್ ಉಪ್ಪಿನಂಗಡಿ ಇದರ ಟ್ರೈನರ್ ಆಗಿರುವ ಚಂದನ್ ಕುಮಾರ್ ಮಿಸ್ಟರ್ ದಕ್ಷಿಣ ಕನ್ನಡ ಬಿರುದು ತಮ್ಮದಾಗಿಸಿಕೊಂಡಿದ್ದಾರೆ.

ಮೂಲತಃ ಬೆಳ್ತಂಗಡಿ ತಾಲೂಕು ಕಣಿಯೂರ್ ಗ್ರಾಮದ ಪೂವಣಿ ಕೊಡಿ ನಿವಾಸಿ ಚಂದನ್ ಕುಮಾರ್‌ರವರು ಪುರುಷರ ವಿಭಾಗದ ಸ್ಪೋರ್ಟ್ಸ್ ಮೋಡಲ್ ನಲ್ಲಿ ಚಿನ್ನದ ಪದಕ ಹಾಗೂ ಮೆನ್ಸ್ ಫಿಸಿಕ್ಸ್ ಮಾಡೆಲ್‌ನಲ್ಲಿ ಬೆಳ್ಳಿ ಪದಕ ಗಳಿಸಿ ಗಮನಾರ್ಹ ಸಾಧನೆ ತೋರಿದ್ದಾರೆ. ಉಪ್ಪಿನಂಗಡಿಯ ಸಮ್ ಸಪ್ಲಿಮೆಂಟ್ ಆಂಡ್ ಫಿಟ್ನೆಸ್ ಸಂಸ್ಥೆಯ ಸಂದೀಪ್ ಶೆಣೈ, ರವಿತೇಜ ಅಲಂಕಾರ್, ಪ್ರಜಿಶ್ ಅಲಂಕಾರ್, ವಿನೀಶ್ ಪುತ್ತೂರು, ಸ್ಟೇಪಿನ್ ಮಾಡ್ಯನಂತರ್. ಚಂದ್ರಪ್ರಕಾಶ್ ಭಟ್, ಅಭಿಜಿತ್ ಕುಮಾರ್ ಉಪಸ್ಥಿತರಿದ್ದರು. ಚಂದನ್ ಕುಮಾರ್‌ರವರು ಬಾಲುಸ್ ಮಲ್ಟಿ ಜಿಮ್ ಉಪ್ಪಿನಂಗಡಿ ಇದರ ಟ್ರೈನರ್ ಆಗಿದ್ದು ಬಾಬು ಮುಗೇರ ಮತ್ತು ಲಕ್ಷ್ಮಿ ದಂಪತಿ ಇವರ ಪುತ್ರ.

LEAVE A REPLY

Please enter your comment!
Please enter your name here