ರಾಜ್ಯ ಸರಕಾರ ಕರ್ನಾಟಕ ಭೂ ಕಂದಾಯ ವಿದೇಯಕವನ್ನು ಮಂಡಿಸಿದ್ದು ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಸರಕಾರ ನಿರ್ಧರಿಸಿದೆ. ಕಟ್ಟಡ ನಿರ್ಮಾಣಕ್ಕೆ ಭೂಮಿ ಪರಿವರ್ತನೆಗಾಗಿ ಸುಮಾರು 5 ರಿಂದ 6 ತಿಂಗಳು ಅಲೆದಾಡಬೇಕಾಗಿತ್ತು. ಇದನ್ನು ತಪ್ಪಿಸಿ 7 ದಿನಗಳಲ್ಲಿ ಭೂಪರಿವರ್ತನೆ ಮಾಡಿಕೊಡಲು ಈ ವೀಧೇಯಕವನ್ನು ಮಂಡಿಸಲಾಗಿದೆ ಮತ್ತು ಭ್ರಷ್ಟಾಚಾರವು ಕಡಿಮೆಯಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.