ಕೋವಿಡ್‌ ಭಯ ಬೇಡ- ಪ್ರಧಾನಿ, ಅಮಿತ್‌ ಶಾ ಬೆಂಗಳೂರಿಗೆ, ಜ.2ಕ್ಕೆ ನೋಟ್‌ ಬ್ಯಾನ್‌ ತೀರ್ಪು ಸಾಧ್ಯತೆ

0

 

ಜನವರಿ ಮೊದಲ ವಾರದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಬೆಂಗಳೂರಿಗೆ ಭೇಟಿ ನೀಡಲಿದ್ದು ಭಾರತೀಯ ಜನತಾ ಪಕ್ಷದ ನಾಯಕರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ವಿಧಾನ ಸಭೆ ಚುನಾವಣೆ ಎದುರಿಸಲು ಸಜ್ಜಾಗಿ ಎಂಬ ಸಂದೇಶವನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಪೊಲೀಸ್‌ ಇಲಾಖೆಗೆ ರವಾನಿಸಿದ್ದು ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಅವಧಿಪೂರ್ವ ವಿಧಾನ ಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಕೋವಿಡ್‌ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದು ಜನತೆ ಕೋವಿಡ್‌ ಕುರಿತು ಅನಗತ್ಯ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ. 

2016ರಲ್ಲಿ 1000 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನೀಕರಣ ಮಾಡಿದ್ದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ನ ಸಂವೀಧಾನಿಕ ಪೀಠ ಜ.2ರಂದು ಈ ಕುರಿತ ತೀರ್ಪು ಪ್ರಕಟಿಸಲಿದೆ. ಸಂವೀಧಾನ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎಸ್.ಎ ನಝೀರ್‌ ರವರು ಜ.4ರಂದು ನಿವೃತ್ತರಾಗಲಿದ್ದು ನಿಗದಿತ ದಿನದಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

 

LEAVE A REPLY

Please enter your comment!
Please enter your name here