ಕುಂಡಡ್ಕದ ಬೇರಿಕೆಯಲ್ಲಿ ಸತ್ಯನಾರಾಯಣ ಪೂಜೆ, ಗುರುಪೂಜೆ: ಮನುಷ್ಯ ಜನ್ಮವನ್ನು ಸಾರ್ಥಕ್ಯ ಮಾಡೋಣ: ಶ್ರೀ ಶ್ರೀಕೃಷ್ಣ ಗುರೂಜಿ

0

ವಿಟ್ಲ: ಮನುಷ್ಯರಾಗಿ ಬದುಕಲು ನಮಗೆ ಸಿಕ್ಕಿದ ಅಪೂರ್ವವಾದ ಅವಕಾಶ ಸಿಕ್ಕಿದೆ. ಈ ಜನ್ಮವನ್ನು ಸಾರ್ಥಕಗೊಳಿಸುವ ಕಾರ್ಯ ನಮ್ಮಿಂದಾಗಬೇಕು. ಪ್ರತಿಯೊಂದು ಧರ್ಮ, ಪ್ರತಿಯೊಬ್ಬರನ್ನೂ ಗೌರವಿಸುವ ಮನೋಭಾವ ನಮ್ಮಲ್ಲಿರಬೇಕು. ಕಷ್ಟ, ನೋವು, ಟೀಕೆ, ಅವಮಾನ ಇವೆಲ್ಲವುಗಳನ್ನು ಸಹಿಸಿಕೊಂಡು ಮುನ್ನಡೆದಾಗ ಮಾತ್ರ ಯಶಸ್ಸು ಪಡೆಯಬಹುದು ಎಂದು ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀ ಶ್ರೀಕೃಷ್ಣ ಗುರೂಜಿರವರು ಹೇಳಿದರು.

ಅವರು ಕುಂಡಡ್ಕದ ಬೇರಿಕೆಯಲ್ಲಿ ಕುಂಡಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಗುರು ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಹರೀಶ್ ಮರುವಾಳರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಹೆಚ್, ಪುತ್ತೂರು ಯುವವಾಹಿನಿ ಮಾಜಿ ಅಧ್ಯಕ್ಷ ಜಯಂತ ಬಾಯಾರ್, ಜಯಪ್ರಕಾಶ್ ಬದಿನಾರು, ಸುಂದರ ಪೂಜಾರಿ ರಾಂಬೈಲು, ಮಹಿಳಾ ಘಟಕದ ಅಧ್ಯಕ್ಷೆ ಸುಮಲತಾ ಅಳಕೆಮಜಲು, ಗೌರವಾಧ್ಯಕ್ಷೆ ಸುಮ ದೇಜಪ್ಪ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ,ಕಲಾವಿದ ದೇಜಪ್ಪ ಪೂಜಾರಿ ನಿಡ್ಯ, ಹಿರಿಯರಾದ ವೆಂಕಪ್ಪ ಪೂಜಾರಿ ಪಿಲಿಂಜ, ಕೊರಗಪ್ಪ ಪೂಜಾರಿ ಮಂಜಪಾಲುರವರನ್ನು ಸನ್ಮಾನಿಸಲಾಯಿತು. ನಳಿನಿ ರಾಜೇಶ್ ಪ್ರಾರ್ಥನೆ ಹಾಡಿದರು. ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸ್ವಾಗತಿಸಿದರು. ಎಲ್ಯಣ್ಣ ಪೂಜಾರಿ ಮೈರುಂಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಹರೀಶ್ ನೀರಕೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here