ಪುತ್ತೂರು: ಆಯುಧ ಪೂಜಾ ಸೇವಾ ಸಮಿತಿ ದರ್ಬೆತ್ತಡ್ಕ ನೇತೃತ್ವದಲ್ಲಿ ಆಯುಧ ಪೂಜಾ ಕಾರ್ಯಕ್ರಮವು ಸೆ.28 ರಂದು ಸುಬ್ರಹ್ಮಣ್ಯ ಭಟ್ ಅಡ್ಯತ್ತಿಮಾರ್ ಇವರ ಪೌರೋಹಿತ್ಯದಲ್ಲಿ ನಡೆಯಿತು.
ಸನ್ಮಾನ ಮತ್ತು ನವರಾತ್ರಿ ವೇಷಗಳ ಆಕರ್ಷಣೀಯ ಕುಣಿತ ಸ್ಪರ್ಧೆ ಮಾರ್ನೆಮಿದ ರಂಗ್ 2025 ನಡೆಯಿತು.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮ ಆಯುಧ ಪೂಜಾ ಸಮಿತಿ ಅಧ್ಯಕ್ಷ ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪುರಂದರ ಶೆಟ್ಟಿ ಮುಡಾಳ , ರಾಮಚಂದ್ರ ಮಣಿಯಾಣಿ, ವಾಸು ಮಣಿಯಾಣಿ, ನಿವೃತ್ತ ಎ.ಎಸ್.ಐ ಶ್ರೀಧರ .ಕೆ ಜಯರಾಮ ಪೂಜಾರಿ ಕುಕ್ಕುತ್ತಡಿ , ಪ್ರಮೊದಿನಿ ನವೀನ್ ರೈ, ಪುಷ್ಪರಾಜ್ ಕುಡ್ಚಿಲ, ಗಿರೀಶ್ ಶೆಟ್ಟಿ ಗೋವಿಂದಮೂಲೆ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸನ್ಮಾನ
ದೈವಗಳ ಪರಿಚಾರಕ ಕರಿಯ ಶೇಷಗಿರಿ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಸ್ಮೃತಿ ಪಲ್ಲತ್ತಾರು ಮತ್ತು 24-25ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಾದ ಬಬಿತಾ ದರ್ಬೆತ್ತಡ್ಕ ಮತ್ತು ಪುಷ್ಪರಾಜ್ ಮುಡಾಲರನ್ನು ಸನ್ಮಾನಿಸಲಾಯಿತು ಮತ್ತು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಅನ್ನಸಂತರ್ಪಣೆ
ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಬಹುಮಾನ ವಿತರಣೆ
ಮಾರ್ನೆಮಿದ ರಂಗ್ 2025 ಸ್ಪರ್ಧೆಯು ನಡೆದು ಪ್ರಥಮ ಬಹುಮಾನವನ್ನು ಆದಿಮೊಗೇರ್ಕೆಳ ತಂಡ ಬಂಬಿಲ, ದ್ವಿತೀಯ ಬಹುಮಾನ ಶ್ರೀ ದುರ್ಗಾ ಗೆಳೆಯರ ಬಳಗ ಕಾವು ತೃತೀಯ ಬಹುಮಾನ ಸ್ವಾಮಿ ಕೊರಗಜ್ಜ ನಿಡ್ಪಳ್ಳಿ ಪಡೆದುಕೊಂಡಿತು. ತೀರ್ಪುಗಾರರಾಗಿ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಮತ್ತು ಚಂದ್ರಶೇಖರ ಸುಳ್ಯಪದವು, ಮಾರ್ನಿಮಿದ ರಂಗ್ ಸಂಯೋಜಕ ಮೋಹನ ದೇವಗಿರಿ, ಶ್ರೀ ವಿಷ್ಣು ಸೇವಾ ಬಳಗ ದರ್ಬೆತ್ತಡ್ಕ ಇದರ ಪದಾಧಿಕಾರಿಗಳು, ಶ್ರೀ ವಿಷ್ಣು ಸೇವಾ ಮಹಿಳಾ ಬಳಗ ಇದರ ಪದಾಧಿಕಾರಿಗಳು, ಸಾರ್ವಜನಿಕ ಶ್ರೀ ಒತ್ತೆಕೋಲ ಸಮಿತಿ ದರ್ಬೆತ್ತಡ್ಕ ಇದರ ಪದಾಧಿಕಾರಿಗಳು ಹಾಗೂ ಆಯುಧ ಪೂಜಾ ಸೇವಾ ಸಮಿತಿ ದರ್ಬೆತ್ತಡ್ಕ ಇದರ ಸದಸ್ಯರು ಸಹಕರಿಸಿದರು. ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿ, ಪುರುಷೋತ್ತಮ್ ವಂದಿಸಿದರು. ಸದಾನಂದ ಕೆ.ಎಂ ಕಾರ್ಯಕ್ರಮ ನಿರೂಪಿಸಿದರು.