ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.
ಶಾಲೆಯ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಮಧುಶ್ರೀಯವರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಗಣಿತಶಾಸ್ತ್ರ ಅಧ್ಯಾಪಕರಾದ ವೆಂಕಟೇಶ ದಾಮ್ಲೆಯವರು ಗಣಿತ ದಿನಾಚರಣೆ ಮತ್ತು ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ರವರ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳಿಂದ ಗಣಿತಕ್ಕೆ ಸಂಬಂಧಿಸಿದ ಹಾಡು, ಸ್ವಾಗತ ನೃತ್ಯ, ಪ್ರಹಸನ, ಪ್ರಾಚೀನ ಗಣಿತದ ಕಲ್ಪನೆ, ಮೂಕಾಭಿನಯ, “ಪೈ”ಯ ಬೆಲೆ, ವಿವಿಧ ಗಣಿತಜ್ಞ ಪರಿಚಯ ಭಾಷಣ ಏರ್ಪಡಿಸಲಾಗಿತ್ತು. ಶಾಲೆಯ ಗಣಿತ ಅಧ್ಯಾಪಕರಾದ ಪ್ರವೀಣ್ ಜೈನ್‌ರವರು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲೆಯ ಗಣಿತ ಶಿಕ್ಷಕಿಯರಾದ ಭವ್ಯ ಎಸ್. ಸ್ವಾಗತಿಸಿದರು. ಗಣಿತ ಶಿಕ್ಷಕಿ ಮೋಕ್ಷಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.