ಕಾಶಿಯಲ್ಲಿ ಶಾಂತಾ ಕುಂಟಿನಿಯವರ ‘ಜೈ ಸೀತಾ ರಾಮ್’ ಧ್ವನಿ ಸುರುಳಿ ಬಿಡುಗಡೆ

0

ಪುತ್ತೂರು: ಸತ್ಯ ಶಾಂತ ಪ್ರತಿಷ್ಠಾನದ ಅರ್ಪಣೆ ಹಾಗೂ ಶಾಂತಾ ಕುಂಟಿನಿಯವರ ಸಾಹಿತ್ಯ ರಚನೆ ಮತ್ತು ನಿರ್ಮಾಣ ಹಾಗೂ ದ.ಕ ಜಿಲ್ಲೆಯ ಹೆಸರಾಂತ ಗಾಯಕರಾದ ಅರವಿಂದ್ ವಿವೇಕ್, ಪ್ರತೀಕ್ಷಾ, ಸೌಜನ್ಯ ಗೌಡ, ನಿತಿನ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಯೂಟ್ಯೂಬ್ ಹಾಡು ‘ಜೈ ಸೀತಾ ರಾಮ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಕಾಶಿಯ ಕನ್ನಡದ ಕಂಪು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಯಿತು.

ಉತ್ತರ ಪ್ರದೇಶದ ಕಾಶಿ ವಾರಣಾಸಿ ಜಂಗಮವಾಡಿ ಮಠದ ಕಾಶಿ ಜಗದ್ಗುರು ಚಂದ್ರ ಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡ ಈ ಹಾಡಿನ ಸಂಕಲನವನ್ನು ಕಬಕದ ಮಿಥುನ್ ನಿರ್ವಹಿಸಿದ್ದಾರೆ.

ಸಮೃದ್ಧಿ ಫೌಂಡೇಷನ್ ಬೆಂಗಳೂರು, ಕಥಾ ಬಿಂದು ವೇದಿಕೆ ಹಾಗೂ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಂತಾ ಕುಂಟಿನಿ, ರುದ್ರಾರಾಧ್ಯ, ಸಿದ್ಧಲಿಂಗಯ್ಯ, ರವೀಂದ್ರಕಿಣಿ, ಕೃಷ್ಣಮೂರ್ತಿ ಪುದುಕೋಳಿ, ವೆಂಕಟ್ರಮಣ ಭಟ್, ಎಂ.ಎಸ್. ಸುಧಾಮಣಿ ವೆಂಕಟೇಶ್, ನಾಗರಾಜ್, ಡಾ. ಪರಮೇಶ್ವರಪ್ಪ ಎಸ್. ಬ್ಯಾಡಗಿ, ಡಾ. ಬಸವ ಪ್ರಭು ಜಿರಲಿ, ಸುನಿತಾ, ಪ್ರದೀಪ್ ಕುಮಾರ್, ನಳಿನಿ ಗಂಗಾಧರ ಚಿಲುಮೆ ಮತ್ತು ಶಿವಾನಂದ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here