ಆಲಂಕಾರಿನಲ್ಲಿ ಅಯ್ಯಪ್ಪ ಸ್ವಾಮಿ ಮಂದಿರ ಲೋಕಾರ್ಪಣೆ

0

ಆಲಂಕಾರು: ಆಲಂಕಾರು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಲೋಕರ್ಪಣ ಕಾರ್ಯಕ್ರಮ ಡಿ.25 ರಂದು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ದೀಕ್ಷಿತ ಶ್ರೀ ಯುವರಾಜ ಗುರುಸ್ವಾಮಿಯವರ ಧರ್ಮಪತ್ನಿ ಭಾರತಿ ಬೆಳ್ತಂಗಡಿಯವರು ದೀಪ ಬೆಳಗಿಸುವುದರೊಂದಿಗೆ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರದಾನ ಆರ್ಚಕರಾದ ಹರಿಪ್ರಸಾದ್ ಉಪಾಧ್ಯಾಯರು ಧಾರ್ಮಿಕ ವಿಧಿವಿಧಾನ ನೇರವೆರಿಸಿದ ನಂತರ ಲೋಕರ್ಪಣ ಕಾರ್ಯಕ್ರಮ ನಡೆಯಿತು ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸನಾತನ ಹಿಂದೂ ಧರ್ಮದ ಅಡಿಯಲ್ಲಿ ಭಾರತದ ಆಚಾರ ವಿಚಾರಗಳು ನೆಲೆ ನಿಂತಿದೆ. ಧರ್ಮ ರಕ್ಷಣೆಯ ಜೊತೆಗೆ ರಾಷ್ಟ್ರ ರಕ್ಷಣೆಯ ಕೆಲಸ ಕಾರ್ಯಗಳು ನಡೆಯಬೇಕು.


ಸಂಘ ಸಂಸ್ಥೆಗಳು ಭಜನಾ ಮಂದಿರಗಳಂತಹ ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮಾಡಿ ಸನಾತನ ಧರ್ಮದ ಆಚಾರ ವಿಚಾರಗಳನ್ನು ಜನರಿಗೆ ತಿಳಿಸಿ ರಾಷ್ಟ್ರ ರಕ್ಷಣೆ ಕಾರ್ಯವನ್ನು ಮಾಡಬೇಕೆಂದರು.

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಧಾರ್ಮಿಕ ಉಪನ್ಯಾಸ ನೀಡಿ ಧಾರ್ಮಿಕ
ನಂಬಿಕೆಗಳಿಗೆ ದೇವರು ಒಲಿಯುತ್ತಾನೆ. ಧರ್ಮ ನಂಬಿಕೆಯ ಆಧಾರದಲ್ಲಿ ನಿಂತಿರುವ ಕಾರಣ ಯಾವುದೇ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಟೀಕೆ ಮಾಡಬಾರದು, ಧಾರ್ಮಿಕ ಚಿಂತನೆಗಳಿಂದ ಕ್ಷೇತ್ರಗಳ ಅಭಿವೃದ್ದಿಯಾಗುತ್ತದೆ,ಕ್ಷೇತ್ರಗಳು ಅಭಿವೃದ್ದಿಗೊಂಡರೆ ಮಾನವ ಕೂಡ ಅಭಿವೃದ್ದಿಗೊಳ್ಳತ್ತಾನೆ ಎಂದು ತಿಳಿಸಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿ ಮಂದಿರ ಎಲ್ಲಾ ಭಕ್ತ ಸಮೂಹದ ಸಹಕಾರದೊಂದಿಗೆ ಅಭಿವೃದ್ದಿಗೊಳ್ಳಲಿ ಎಂದು ತಿಳಿಸಿದರು .

ಸುಳ್ಯ ಅಯ್ಯಪ್ಪ ಸ್ವಾಮಿ ಮಂದಿರ ಶ್ರೀ ಕ್ಷೇತ್ರ ಅಡ್ಪಂಗಾಯದ ಧರ್ಮದರ್ಶಿಗಳು ಮಾತನಾಡಿ ಅಯ್ಯಪ್ಪ ವೃತಧಾರಿಗಳು ವೃತಾಚರಣೆ, ಉಡುವ ಉಡುಗೆ ತೊಡುಗೆಗಳಲ್ಲಿ ಬದಲಾವಣೆಗಳು ಇತ್ತಿಚ್ಚೆಗೆ ಕಂಡು ಬರುತ್ತಿವೆ. ಗುರುಸ್ವಾಮಿಗಳು ಈ ಬಗ್ಗೆ ಗಮನ ಹರಿಸಬೇಕು ಅಯ್ಯಪ್ಪ ಸ್ವಾಮಿಯ ಪವಿತ್ರ ಆಚಾರ ವಿಚಾರಗಳನ್ನು ಉಳಿಸಿ ಹಾಗು ಬೆಳೆಸುವ ಕಾರ್ಯ ಅಯ್ಯಪ್ಪ ವೃತಧಾರಿಗಳಿಂದ ನಡೆಯಬೇಕೆಂದರು. ಅಯ್ಯಪ್ಪ ಸ್ವಾಮಿ ಮಂದಿರದ ಮಂದಿರದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ 60 ದಿವಸದಲ್ಲಿ ಅಯ್ಯಪ್ಪಮಂದಿರ ನಿರ್ಮಾಣಗೊಂಡಿದೆ.ಇದಕ್ಕೆ ಮೂಲಕಾರಣ ಊರ ಪರವೂರ ಭಕ್ತಾಧಿಗಳ ಸಹಕಾರ ಎಂದು ತಿಳಿಸಿ ಸಹಕಾರಿಸಿದವರಿಗೆ ಅಭಿನಂದನೆ ಸಲ್ಲಿಸಿದರು.


ಆಲಂಕಾರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸದಾನಂದ ಆಚಾರ್ಯ, ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು . ಇದೇ ಸಂಧರ್ಭದಲ್ಲಿ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಾಣಕ್ಕೆ ಭೂಮಿಯನ್ನು ದಾನ ವಾಗಿ ನೀಡಿದ ನೆಕ್ಕಿಲಾಡಿ ಹುಕ್ರ ಮುಗೇರರ ಪತ್ನಿ ಮಂಚೆದಿ ಇವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು ನಂತರ ದೀಕ್ಷಿತ ಎಸ್ ಮೇದಪ್ಪ ಗುರುಸ್ವಾಮಿ ಯವರು ಮಾತನಾಡಿ ಆಲಂಕಾರಿನ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ನಿರ್ಮಾಣಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ ಈ ಸಾರಿ 42 ಮಂದಿ ಅಯ್ಯಪ್ಪ ಸ್ವಾಮಿ ವೃತದಾರಿಗಳು ಮಾಲಧಾರಣೆ ಮಾಡಿದ್ದು ಜ.7 ರಂದು ಅಯ್ಯಪ್ಪ ಸ್ವಾಮಿಯ ಪ್ರಭಾವಳಿಯೊಂದಿಗೆ,ಪಾಲಶ ಕೊಂಬೆಯೊಂದಿಗೆ ಅಯ್ಯಪ್ಪ ವೃತದಾರಿಗಳು ಆಲಂಕಾರಿ ನಿಂದ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀಧಿ ತನಕ ಮೆರವಣಿಗೆಯಲ್ಲಿ ಸಾಗಿ ನಂತರ ಅಪ್ಪಸೇವೆ,ಕೆಂಡ ಸೇವೆ,ಹಾಗು ಯಕ್ಷಗಾನ ಬಯಲಾಟ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು

. ಸಮಿತಿಯ ಪದಾದಿಕಾರಿಗಳಾದ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ ಕೆ ಸಿ ಕಾರ್ಯಕ್ರಮ ನಿರೂಪಿಸಿ,ಕಾರ್ಯದರ್ಶಿ ಮಹೇಶ್ ಕಕ್ವೆ ವಂದಿಸಿದರು.

ಬೆಳಿಗ್ಗೆ ಗಣಹೋಮ ನಡೆದು ಕೊಂಡಾಡಿ ಕೊಪ್ಪ ಮಾತೃ ಶ್ರೀ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಡಿ.24 ರಂದು ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಆಲಂಕಾರು ಪೇಟೆಯಿಂದ ಮೆರವಣಿಗೆಯ ಮೂಲಕ ಅಯ್ಯಪ್ಪ ಮಂದಿರ ತನಕ ಮೆರವಣಿಗೆ ನಡೆಸಿ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನನೊಂದಿಗೆ ಡಿ.25 ರಂದು ಪ್ರತಿಷ್ಠಾಪಿಸಲಾಯಿತು. ಕಾರ್ಯಕ್ರಮದಲ್ಲಿ ಅಯ್ಯಪ್ಪ ವೃತದಾರಿಗಳು,ಭಕ್ತಾಧಿಗಳು ಹಾಗು ಊರವರು ಸಹಕರಿಸಿದರು.

LEAVE A REPLY

Please enter your comment!
Please enter your name here