ಇನ್ಸೂರೆನ್ಸ್ ವ್ಯವಹಾರದಲ್ಲಿ ದ,ಕ, ಜಿಲ್ಲೆಯಲ್ಲಿ ಸತೀಶ್ ರೈ ಕಟ್ಟಾವು ಪ್ರಥಮ

0

ಪುತ್ತೂರು: ಇಪ್ಕೊ-ಟೋಕಿಯೋ ಜನರಲ್ ಇನ್ಸೂರೆನ್ಸ್ ಸಂಸ್ಥೆಯ ವ್ಯವಹಾರದಲ್ಲಿ ದ.ಕ,ಜಿಲ್ಲೆಯಲ್ಲಿ ಉದ್ಯಮಿ, ಕಟ್ಟಾವು ಇನ್ಸೂರೆನ್ಸ್ ಸೆಂಟರ್‌ನ ಮಾಲಕ ಸತೀಶ್ ರೈ ಕಟ್ಟಾವುರವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸತೀಶ್ ರೈಯವರನ್ನು ಪುತ್ತೂರು ದರ್ಬೆಯಲ್ಲಿರುವ ಕಟ್ಟಾವು ಇನ್ಸೂರೆನ್ಸ್ ಸೆಂಟರ್‌ನಲ್ಲಿ ಇಪ್ಕೊ-ಟೋಕಿಯೋ ಜನರಲ್ ಇನ್ಸೂರೆನ್ಸ್ ಸಂಸ್ಥೆಯ ಡಿಜಿಎಂ. ಸುನೀಲ್ ಕುಮಾರ್ ಯರಗಟ್ಟಿ ಅಭಿನಂದಿಸಿ, ಸನ್ಮಾನಿಸಿದರು. ಸಂಸ್ಥೆಯ ಬ್ರಾಂಚ್ ಮೆನೇಜರ್ ಮಿಥುನ್ ಎಸ್.ಆರ್, ಏಜೆನ್ಸಿ ಅಭಿವೃದ್ಧಿ ಅಧಿಕಾರಿ ಯೋಗೀಶ್ ಕುಲಾಲ್ ಉಪಸ್ಥಿತರಿದ್ದರು.


ಸತೀಶ್ ರೈ ಕಟ್ಟಾವುರವರ ಕಟ್ಟಾವು ವಾಹನ ಇನ್ಸೂರೆನ್ಸ್ ಸೆಂಟರ್‌ನ ಪ್ರಧಾನ ಕಚೇರಿಯು ಪುತ್ತೂರಿನ ದರ್ಬೆ ಅಶ್ವಿನಿ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದು, ಇದರ 27ಶಾಖೆಗಳು ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹೊಂದಿರುತ್ತದೆ.

LEAVE A REPLY

Please enter your comment!
Please enter your name here