ರಾಜ್ಯಮಟ್ಟದ “ಕಲೋತ್ಸವ-2022”-ತೆಂಕಿಲ ಆ.ಮಾ ಶಾಲೆಯ ವಿದ್ಯಾರ್ಥಿನಿ ಆಂಗಿಕಾ ಶೆಟ್ಟಿ ದ್ವಿತೀಯ

0

ಪುತ್ತೂರು : ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರಕಾರ ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿ ಯವರು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ “ಕಲೋತ್ಸವ-2022″ರಲ್ಲಿ ಕುಮಾರಿ ಆಂಗಿಕಾ ಶೆಟ್ಟಿ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ  ಈಕೆ  ವಿದುಷಿ ಸ್ವಸ್ತಿಕಾ.ಆರ್.ಶೆಟ್ಟಿ ಹಾಗೂ ರಾಜಕುಮಾರ್ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಎಂಡ್ ಕಲ್ಚರ್ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕರ್ನಾಟಕ ಕಲಾಶ್ರೀ ಕುದ್ಕಾಡಿ ವಿಶ್ವನಾಥ್ ರೈ ಮತ್ತು ವಿದುಷಿ ಶ್ರೀಮತಿ ನಯನಾ.ವಿ.ರೈ  ಇವರ ಮೊಮ್ಮಗಳು. ವಿದುಷಿ ಸ್ವಸ್ತಿಕಾ.ಆರ್. ಶೆಟ್ಟಿ ಹಾಗೂ ವಿದುಷಿ ನಯನಾ.ವಿ.ರೈ ಇವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು, ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿರುತ್ತಾಳೆ.  

LEAVE A REPLY

Please enter your comment!
Please enter your name here