ಪುತ್ತೂರು ಡೆಂಟಲ್ ಕೇರ್ ಶುಭಾರಂಭ

0

ವೈದ್ಯರುಗಳಿಗೆ ನಾವು ಇಂದು ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್
ವೈದ್ಯರಲ್ಲಿ ನಂಬಿಕೆ, ಸಮಯಪಾಲನೆ ಹೊಂದಿರಬೇಕಾಗುತ್ತದೆ-ಡಾ.ಶ್ರೀಪ್ರಕಾಶ್
ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿದ್ದಲ್ಲಿ ಉತ್ತಮ ವೈದ್ಯರಾಗಿ ಬೆಳೆಯುತ್ತಾರೆ-ಡಾ.ನಝೀರ್ ಅಹಮದ್

ಪುತ್ತೂರು: ಎಪಿಎಂಸಿ ರಸ್ತೆಯ ಸಾಯ ಎಂಟರ್‌ಪ್ರೈಸಸ್ ಬಳಿಯ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಪುತ್ತೂರು ಡೆಂಟಲ್ ಕೇರ್ ದ.೨೬ ರಂದು ಶುಭಾರಂಭಗೊಂಡಿತು.


ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ನೂತನ ಡೆಂಟಲ್ ಕೇರ್ ಸಂಸ್ಥೆಗೆ ಪವಿತ್ರ ಜಲ ಸಂಪ್ರೋಕ್ಷಿಸಿ ಮಾತನಾಡಿ, ಹಲ್ಲುಗಳು ಮನುಷ್ಯನ ಅಂಗ. ಹಲ್ಲುಗಳು ಮಾನವನ ಸೌಂದರ್ಯವರ್ಧಕ ಸಾಧನಗಳಲ್ಲೊಂದಾಗಿದೆ. ನೂತನವಾಗಿ ಉದ್ಘಾಟನೆಗೊಂಡ ಈ ಸಂಸ್ಥೆಯು ಇಲ್ಲಿಗೆ ಆಗಮಿಸುವವರಿಗೆ ನೆಮ್ಮದಿ ನೀಡುವ ಚಿಕಿತ್ಸಾ ತಾಣವಾಗಲಿ. ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ ನಿಜ. ಆದರೆ ವೈದ್ಯರಲ್ಲಿ ವೈದ್ಯರು ದೇವರು ಆಗಿದ್ದಾರೆ. ಇದೇ ವೈದ್ಯರ ಮುಖಾಂತರ ನಾವು ನಮ್ಮ ರೋಗ-ರುಜಿನಗಳಿಂದ ಪಾರಾಗಿ ನೆಮ್ಮದಿಯ ಜೀವನ ನಡೆಸಲು ಶಕ್ತರಾಗಿದ್ದೇವೆ. ಆದ್ದರಿಂದ ವೈದ್ಯಕೀಯ ಲೋಕದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರುಗಳಿಗೆ ನಾವು ಇಂದು ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ. ನಾವು ಮಾಡು ಯಾವುದೇ ಸೇವೆಯಾಗಲಿ ಅದು ಪ್ರೀತಿಯಿಂದ ಮಾಡಿದಾಗ ನಮಗೆ ನೆಮ್ಮದಿಯ ಜೀವನ ಲಭಿಸುವಂತಾಗುತ್ತದೆ ಎಂದು ಹೇಳಿ ಅವರು ಶುಭ ಹಾರೈಸಿದರು.


ಮುಖ್ಯ ಅತಿಥಿ, ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ವೈದ್ಯ ಹಾಗೂ ರೋಟರಿ ಕ್ಲಬ್ ಪುತ್ತೂರು ಮತ್ತು ಪುತ್ತೂರು ಡೆಂಟಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್‌ರವರು ಮಾತನಾಡಿ, ಡಾ.ಶನನ್ ಮಸ್ಕರೇನ್ಹಸ್‌ರವರು ಓರ್ವ ಸಹೃದಯಿ, ಮೃದು ಸ್ವಭಾವದ ವ್ಯಕ್ತಿತ್ವದ ಜೊತೆಗೆ ಯಾರಿಗೂ ನೋಯಿಸದ ವ್ಯಕ್ತಿಯಾಗಿದ್ದಾರೆ. ವೈದ್ಯರು ಎನಿಸಿಕೊಂಡವರು ತಮ್ಮ ಕರ್ತವ್ಯದ ಬಗ್ಗೆ ನಂಬಿಕೆ ಇರಬೇಕು ಮತ್ತು ಸಮಯಪಾಲನೆಯನ್ನು ಪಾಲಿಸಬೇಕು. ನಂಬಿಕೆ ಮತ್ತು ಸಮಯಪಾಲನೆ ವ್ಯಕ್ತಿಯನ್ನು ಉತ್ತುಂಗಕ್ಕೆ ಏರಿಸಬಲ್ಲ ಶಕ್ತಿಯಾಗಿದೆ. ವೈದ್ಯರನ್ನು ಅರಸಿಕೊಂಡು ಬರುವ ರೋಗಿಗಳಿಗೆ ವೈದ್ಯರಾದವರು ಕ್ಲಪ್ತ ಸಮಯಕ್ಕೆ ಬಂದು ಮುಗುಳ್ನಗೆಯ ಮೂಲಕ ಸೇವೆಯನ್ನು ನೀಡಿದಾಗ ಆತ ಕರ್ತವ್ಯದಲ್ಲಿ ಯಶಸ್ವಿಯಾಗಬಲ್ಲ ಎಂದು ಹೇಳಿ ಶುಭ ಹಾರೈಸಿದರು.


ಕಲ್ಲಾರೆ ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್‌ನ ವೈದ್ಯಕೀಯ ತಜ್ಞ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರು ಮಾತನಾಡಿ, ಯಾವುದೇ ವೃತ್ತಿಪರ ಕ್ಷೇತ್ರವಿರಲಿ, ನಾವು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ಸಣ್ಣಮಟ್ಟಿನ ತಪ್ಪುಗಳು ಸಂಭವಿಸುವುದು ಸಹಜ. ಆದರೆ ಆದಂತಹ ಸಮಸ್ಯೆಗಳಿಂದ ಪಾಠವನ್ನು ಕಲಿತು ಕಷ್ಟದಲ್ಲಿರುವವರನ್ನು ಸೂಕ್ತ ಸಮಯದಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡುವುದು ಅತಿ ಮುಖ್ಯವಾಗುತ್ತದೆ. ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಮುಂದೊಂದು ದಿನ ಉತ್ತಮ ವೈದ್ಯನಾಗಿ ಬೆಳೆಯಲು ಸಾಧ್ಯವಾಗುವುದು ಎಂದು ಹೇಳಿ ಶುಭ ಹಾರೈಸಿದರು.


ಸಂದರ್ಶಿಸುವ ವೈದ್ಯರು..
ನೂತನ ಡೆಂಟಲ್ ಕ್ಲಿನಿಕ್‌ಗೆ ದವಡೆಗಳ ಶಸ್ತ್ರಚಿಕಿತ್ಸಕ ಪರಿಣತ ಡಾ.ಅಭಿನವ್ ಸುವರ್ಣ, ಬೇರು ನಾಳ ಚಿಕಿತ್ಸಕ ಪರಿಣತ ಡಾ.ನಿರೀಕ್ಷಾ ಶೆಟ್ಟಿ, ವಕ್ರದಂತ ಚಿಕಿತ್ಸಕ ಪರಿಣತ ಡಾ.ಮುರಳಿ ಪಿ.ಎಸ್, ಕೃತಕ ದಂತಪಂಕ್ತಿಗಳ ಚಿಕಿತ್ಸಾ ಪರಿಣತ ಡಾ.ಮೇಗನ್ ಶೆಟ್ಟಿರವರು ಕನ್ಸಲ್ಟೆಂಟ್ ವೈದ್ಯರಾಗಿ ಆಗಮಿಸಲಿರುವರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಕೆ.ಕೃಷ್ಣಪ್ಪ, ನಿವೃತ್ತ ಆರೋಗ್ಯ ಪರಿವೀಕ್ಷಕ ಅಬೂಬಕ್ಕರ್ ಬನ್ನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಲೇರಿಯನ್ ಡಾಯಸ್, ನಿರ್ದೇಶಕ ಮನೋಜ್ ಡಾಯಸ್, ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲು, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಸೂರಜ್ ಶೆಟ್ಟಿ ಸಾಮೆತ್ತಡ್ಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪುತ್ತೂರು ತಾಲೂಕು ಅಧ್ಯಕ್ಷ ಶಿವಾನಂದ ಆಚಾರ್ಯ, ಪುತ್ತೂರು ಎಪಿಎಂಸಿಯ ರಾಮಚಂದ್ರ, ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ ಕೂರ್ನಡ್ಕ, ಎಪಿಎಂಸಿ ಮಾಜಿ ನಿರ್ದೇಶಕ ವಿ.ಎಚ್ ಶಕೂರ್ ಹಾಜಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್ ದಂಪತಿ ಕಾವೇರಿಕಟ್ಟೆ, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿ, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾದ್ಯಕ್ಷ ತೋಮಸ್ ಫೆರ್ನಾಂಡೀಸ್, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ, ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್, ನವಜೀವನ್ ಫ್ಲವರ್‍ಸ್‌ನ ಜೋನ್ ಪೀಟರ್ ಡಿ’ಸಿಲ್ವ(ವಲ್ಲು), ಮಹಾಲಕ್ಷ್ಮೀ ಕೋಲ್ಡ್ ಹೌಸ್‌ನ ಜಯಂತ್ ಭಂಡಾರಿ, ವಾಲ್ಟರ್ ಡಿಸೋಜ ಸಿದ್ಯಾಲ, ಎಪಿಎಂಸಿ ಹೊಟೇಲ್ ಸ್ವೀಕಾರ್‍ನ ವಿನ್ಸೆಂಟ್ ತಾವ್ರೋ(ರುತು), ಉದ್ಯಮಿ ರೋಶನ್ ರೈ ಬನ್ನೂರು, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಕೂರ್ನಡ್ಕ ಕಿಂಗ್ಸ್ ಅರೇಂಜರ್‍ಸ್‌ನ ವಿನ್ಸನ್ ರೇಗೊ ಕೂರ್ನಡ್ಕ, ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಜೀವನ್ ಮಾರ್ಟಿಸ್ ಪುತ್ತೂರು, ಕ್ಲಾಸಿಕ್ಲಿಕ್ಸ್‌ನ ರೋಶನ್ ಡಾಯಸ್-ಬಬಿತಾ ದಂಪತಿ, ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ತಾಲೂಕು ಶಾಖೆಯ ಮಾಜಿ ಅಧ್ಯಕ್ಷ ಸಿ.ಸೀತಾರಾಮ ಚಿಕ್ಕಪುತ್ತೂರು, ಸುಪ್ರೀಮ್ ಸರ್ವಿಸಸ್‌ನ ಸಿಪ್ರಿಯನ್ ಮೊರಾಸ್, ಫಿಲೋಮಿನಾ ಕಾಲೇಜು ಕ್ಯಾಂಟೀನಿನ ಆನಂದ ಶೆಟ್ಟಿ, ಜೆರೋಮ್ ಫುಡ್ತಾದೋ ಕಜೆ ಸಾಮೆತ್ತಡ್ಕ, ಆವಿನ್ ಇಲೆಕ್ಟ್ರೋನಿಕ್ಸ್‌ನ ಮೆಲ್ವಿನ್ ಫೆರ್ನಾಂಡೀಸ್, ಹುದಾ ಡ್ರೆಸಸ್‌ನ ಅಮೀರ್, ಹಿಮಾ ಕಾರ್ ಎ.ಸಿಯ ಪ್ರಕಾಶ್ ಕುಮಾರ್ ರೈ, ಜೋಸ್ಸಿ ಮಾಡ್ತಾ ಎಪಿಎಂಸಿ ರಸ್ತೆ, ಇಂದೀವರ್ ಭಟ್ ಸಾಮೆತ್ತಡ್ಕ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಆಲ್ವಿನ್ ಗೊನ್ಸಾಲ್ವಿಸ್ ಬನ್ನೂರು, ವಿಲಿಯಂ ನೊರೋನ್ಹಾ ಪರ್ಲಡ್ಕ, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಆಲ್ಫಾ ಕೋಲ್ಡ್ ಸ್ಟೋರೇಜ್‌ನ ಆಲ್ಫೋನ್ಸ್ ಡಿ’ಸೋಜ, ಮೆಲ್ವಿನ್ ಫೆರ್ನಾಂಡೀಸ್ ದರ್ಬೆ, ಸಿದ್ಧೀಕ್ ಸುಲ್ತಾನ್ ಕೂಡುರಸ್ತೆ, ಕೆ.ಮಹಮದ್ ಕೂರ್ನಡ್ಕ, ಆಲಿ ಕುಂಞ ಕೊರಿಂಗಿಲ, ಜೋನ್ ಮಸ್ಕರೇನ್ಹಸ್ ಕಲ್ಲಿಮಾರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ನೂತನ ಪುತ್ತೂರು ಡೆಂಟಲ್ ಕೇರ್‌ನ ಮುಖ್ಯಸ್ಥ ಡಾ.ಶನನ್ ಜೋಶುವಾ ಮಸ್ಕರೇನ್ಹಸ್ ವಂದಿಸಿ, ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಪುತ್ತೂರು ಡೆಂಟಲ್ ಕೇರ್‌ನ ಮುಖ್ಯಸ್ಥ ಡಾ.ಶನನ್ ಜೋಶುವಾ ಮಸ್ಕರೇನ್ಹಸ್‌ರವರ ತಾಯಿಯ ಸಹೋದರ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಜೆಎಂಜೆ ಕಟ್ಟಡದ ಮಾಲಕ ಆಂಟನಿ ಒಲಿವೆರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

ಗಡಿಯಾರ ಕಾಣಿಕೆ..
ಪುತ್ತೂರು ಡೆಂಟಲ್ ಕ್ಲಿನಿಕ್‌ನ ಮುಖ್ಯಸ್ಥರಾದ ಡಾ.ಶನನ್ ಮಸ್ಕರೇನ್ಹಸ್‌ರವರು ಕಳೆದ ಮೂರು ವರ್ಷಗಳಿಂದ ಡಾ.ಶ್ರೀಪ್ರಕಾಶ್‌ರವರ ಕ್ಲಿನಿಕ್ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈದ್ಯರೆನಿಸಿಕೊಂಡವರು ಸಮಯಪಾಲನೆಯನ್ನು ಪ್ರಮುಖವಾಗಿ ಪಾಲನೆ ಮಾಡಿಕೊಂಡು ಕ್ಲಿನಿಕ್‌ಗೆ ಆಗಮಿಸುವ ರೋಗಿಗಳಿಗೆ ಸಂಜೀವಿನಿಯಾಗಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ಡಾ.ಶ್ರೀಪ್ರಕಾಶ್‌ರವರು ಸಮಯಪಾಲನೆಯ ನೆನಪಿಗೆ `ಗಡಿಯಾರ’ವೊಂದನ್ನು ಡಾ.ಶನನ್ ಮಸ್ಕರೇನ್ಹಸ್‌ರವರಿಗೆ ಕಾಣಿಕೆಯಾಗಿ ಸಮರ್ಪಿಸಿದರು.

ತಾಯಿ, ಅಜ್ಜಿಯಿಂದ ಉದ್ಘಾಟನೆ..
ನೂತನ ಕ್ಲಿನಿಕ್‌ನ ದಂತ ವೈದ್ಯರಾದ ಡಾ.ಶನನ್ ಜೋಶುವಾ ಮಸ್ಕರೇನ್ಹಸ್(ಖ್ಯಾತ ವಾಲಿಬಾಲ್ ಹಾಗೂ ಕ್ರಿಕೆಟ್ ಆಟಗಾರ ದಿ.ಸುನಿಲ್ ಮಸ್ಕರೇನ್ಹಸ್‌ರವರ ಪುತ್ರ)ರವರ ತಾಯಿ ಶ್ರೀಮತಿ ಹಿಲ್ಡಾ ರೆಜಿನಾ ಮಸ್ಕರೇನ್ಹಸ್ ಹಾಗೂ ಅಜ್ಜಿ ಹಿಲ್ಡಾ ರೋಚ್(ದಿ.ಸುನಿಲ್ ಮಸ್ಕರೇನ್ಹಸ್‌ರವರ ತಾಯಿ)ರವರು ಜೊತೆಗೂಡಿ ಸಂಸ್ಥೆಯ ರಿಬ್ಬನ್ ಕತ್ತರಿಸಿ ಹಾಗೂ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಮತಿ ಹಿಲ್ಡಾ ರೆಜಿನಾ ಮಸ್ಕರೇನ್ಹಸ್ ಹಾಗೂ ಮೌರಿಸ್ ಮಸ್ಕರೇನ್ಹಸ್‌ರವರ ತಾಯಿ ಮರಿಯಾ ಬೆಂಝಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಸೌಲಭ್ಯಗಳು
*ರೂಟ್ ಕೆನಲ್(ಬೇರು ನಾಳ) ಚಿಕಿತ್ಸೆ *ವಕ್ರದಂತ ಚಿಕಿತ್ಸೆ *ದಂತ ಕಸಿ *ಸಂಪೂರ್ಣ ಹಾಗೂ ಕೃತಕ ದಂತಪಂಕ್ತಿಗಳ ಜೋಡಣೆ *ದಂತ ಕವಚ *ದವಡೆಗಳ ಶಸ್ತ್ರಚಿಕಿತ್ಸೆಗಳ ಸೌಲಭ್ಯ *ಹಲ್ಲಿನ ಸೌಂದರ್ಯ ವರ್ಧಕ ಚಿಕಿತ್ಸೆ *ಡಿಜಿಟಲ್ ಎಕ್ಸ್‌ರೇ *ಹಲ್ಲುಗಳನ್ನು ಸ್ವಚ್ಛಗೊಳಿಸುವಿಕೆ, ಬಿಳುಪುಗೊಳಿಸುವಿಕೆ, ಭರ್ತಿಗೊಳಿಸುವಿಕೆ *ಹಲ್ಲುಗಳನ್ನು ಕೀಳುವುದು *ದಂತಕುಳಿಗಳನ್ನು ಮುಚ್ಚುವುದು *Pಡಿಠಿ/ಠಿಡಿಜಿ ಚಿಕಿತ್ಸೆ *ಹೊಸಡುಗಳ ಶಸ್ತ್ರಚಿಕಿತ್ಸೆ, ಮಕ್ಕಳ ಹಲ್ಲಿನ ಚಿಕಿತ್ಸೆ *ಮುರಿದುಹೋದ ಎದುರಿನ ಹಲ್ಲುಗಳ ಪುನರ್‌ನವೀಕರಣ

LEAVE A REPLY

Please enter your comment!
Please enter your name here