ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವ

0

ಧಾರ್ಮಿಕ ಅರಿವಿನ ಕೊರತೆಯೇ ಗೊಂದಲ, ಸಮಸ್ಯೆಗಳಿಗೆ ಕಾರಣ: ಎಡನೀರು ಶ್ರೀ

ಉಪ್ಪಿನಂಗಡಿ: ಯುವ ಜನತೆಯಲ್ಲಿರುವ ಧಾರ್ಮಿಕ ಅರಿವಿನ ಕೊರತೆಯೇ ಹಿಂದೂ ಸಮಾಜದಲ್ಲಿ ಈಗಿನ ಸಮಸ್ಯೆ, ಗೊಂದಲಗಳಿಗೆ ಕಾರಣ. ಆದ್ದರಿಂದ ಯುವ ಜನತೆಯನ್ನು ಧಾರ್ಮಿಕ ಆಚರಣೆಯಿಂದ ವಿಮುಖರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹೇಳಿದರು.

15 ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಎರಡನೇ ದಿನವಾದ ಸೋಮವಾರ ಸಂಜೆ ಎಡನೀರು ಶ್ರೀ ಯವರು ದೇವಾಲಯದಲ್ಲಿ ನಡೆದ ಶ್ರೀ ಚಕ್ರ ಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಹಿಂದೂ ಸಮಾಜದ ಮೇಲೆ ಹಲವು ಷಡ್ಯಂತ್ರ್ಯಗಳು ನಡೆಯುತ್ತಲೇ ಇದೆ. ಇದನ್ನು ನಡೆಸುವುದು ಅವರ ಕರ್ಮವಾದರೆ, ಅದನ್ನು ತಡೆಹಿಡಿದು ಸಮಾಜವನ್ನು ರಕ್ಷಿಸುವುದು ನಮ್ಮ ಧರ್ಮವಾಗಿದೆ. ಗೊಂದಲ, ಷಡ್ಯಂತ್ರಗಳನ್ನು ಸೃಷ್ಟಿಸುವುದರ ಹಿಂದೆ ಒಂದು ಹಿಡನ್ ಅಜೆಂಡಾ ಇದೆ. ಆದರೆ ಅದರ ವಿರುದ್ಧ ದಿಕ್ಕಿನಲ್ಲಿ ಮುನ್ನಡೆಯುವ ಕಾರ್ಯ ಸಮಾಜದಿಂದಾಗಬೇಕು. ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದು ಹಿರಿಯರು ಹಾಗೂ ಮಕ್ಕಳು. ಪ್ರೌಢಾವಸ್ಥೆಯವರು ಅದರಿಂದ ದೂರವೇ ಉಳಿಯುತ್ತಿದ್ದಾರೆ. ಆದ್ದರಿಂದ ಅವರನ್ನು ಇಂತಹ ಕಾರ್ಯಕ್ರಮಗಳಿಗೆ ಎಳೆದು ತರುವ ಕಾರ್ಯವಾಗಬೇಕು ಎಂದರು.

ದೇವಾಲಯದಲ್ಲಿ ಬೆಳಗ್ಗೆ 5ರಿಂದ ಉಷಃ ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಚತುಃಶುದ್ಧಿ ಧಾರೆ, ಅವಗಾಹ, ಪಂಚಕ ಖನನಾದಿ ಸ್ಥಳಶುದ್ಧಿ, ಪ್ರಾಯಶ್ಚಿತ ಹೋಮಗಳು ನಡೆದವು. ಉಪ್ಪಿನಂಗಡಿ, ನೆಕ್ಕಿಲಾಡಿ, ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮದ ಭಕ್ತಾದಿಗಳು ಹಸಿರು ಹೊರೆ ಕಾಣಿಕೆ ದೇವಾಲಯಕ್ಕೆ ಸಮರ್ಪಿಸಿದರು. ಮಧ್ಯಾಹ್ನ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ದಿನವಿಡೀ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದು, ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನಾ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಲ್ಲಡ್ಕ ವಿಠಲ ನಾಯಕ್ ಅವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಕಳೆಂಜಗುತ್ತುವಿನ ಶ್ರೀಮತಿ ಪದ್ಮಾಸಿನಿ ಎನ್. ಜೈನ್, ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಕೋಶಾಧಿಕಾರಿ ಅಶೋಕ ಕುಮಾರ್ ಮುಳಿಪಡ್ಪು, ಆಡಳಿತ ಸಮಿತಿಯ ಅಧ್ಯಕ್ಷರಾದ ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್., ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಅವಿನಾಶ್ ಜೈನ್ ಪರಂಗಾಜೆ, ಅಧ್ಯಕ್ಷರಾದ ಶಂಭು ಭಟ್ ಬಡೆಕೋಡಿ, ಕಾರ್ಯದರ್ಶಿ ರಮೇಶ್ ತೋಟ, ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ದೇವಾಲಯದ ಪವಿತ್ರಪಾಣಿ ಬಿ. ಕೃಷ್ಣರಾವ್ ಬಾಗ್ಲೋಡಿ, ಅರ್ಚಕರಾದ ಎಂ. ನಾರಾಯಣ ಭಟ್, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ, ವಿವಿಧ ಸಮಿತಿಗಳ ಸಂಚಾಲಕರಾದ ಚಂದಪ್ಪ ಪೂಜಾರಿ ಕೆಳಗಿನಮನೆ, ಲೋಕೇಶ್ ಗೌಡ ಕೊಡ್ಲೆ, ಮಹಾಬಲ ಶೆಟ್ಟಿ ಸಂಪಿಗೆಕೋಡಿ, ರಮೇಶ್ ತೋಟ, ಜಯಶ್ರೀ, ವಿಜಯಲಕ್ಷ್ಮೀ ವಿ. ಶೆಟ್ಟಿ ಪೆರ್ನೆ, ಪ್ರತಿಮಾ ನಾಯಕ್, ವಸಂತ ಶೆಟ್ಟಿ ಮನ್ನೇವು, ಜಯಶ್ರೀ, ಸೌಮ್ಯ ಜೈನ್ ಬಿಳಿಯೂರುಗುತ್ತು, ಕೃಷ್ಣಮೂರ್ತಿ ಕಾರಂತ ಶಂಕರಯ್ಯಪಾಲು, ಮಹಾಬಲ ಪೂಜಾರಿ, ಕೇಶವ ಪೂಜಾರಿ ಸುಣ್ಣಾನ, ವಿಶ್ವನಾಥ ಶೆಟ್ಟಿ ಪೆರ್ನೆ, ಗಂಗಾಧರ ಪೂಜಾರಿ ಪುರಿಯ, ಶ್ರೀಕಾಂತ್ ಯಾದವ ನಾಗಮೂಲೆ, ಪ್ರವೀಣ್ ಮಾಡತ್ತಾರು, ಉಮೇಶ್ ಮಲ್ಲಡ್ಕ, ಪ್ರಮುಖರಾದ ಸಂದೀಪ್ ಪದೆಬರಿ, ಗೋಪಾಲ ಸಪಲ್ಯ, ಸುಂದರ, ಕೇಶವ, ದಿವಾಕರ, ವೇಣುಗೋಪಾಲ, ಸುಧಾಕರ ನಾಯ್ಕ, ಸುಕೇಶ್, ಶಶಿಧರ್, ವಸಂತ ನಾಯ್ಕ, ಮೋಹನ್ ನಾಯ್ಕ, ಮಮತಾ, ಅಜಯ್ ಶೆಟ್ಟಿ, ಧನಂಜಯ, ವಸಂತ ಶೆಟ್ಟಿ, ಬಾಲಕೃಷ್ಣ, ಪದ್ಮನಾಭ ಗೌಡ, ಪದ್ಮನಾಭ ನಾಯ್ಕ, ಜಯಂತ ಕಟ್ಟೆ, ಲೊಕೇಶ್ ನಾಯ್ಕ, ರಾಜಶೇಖರ್ ಶೆಟ್ಟಿ, ಸುರೇಶ್ ಆಚಾರ್ಯ, ಗಿರೀಶ್ ಬಾಗ್ಲೋಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here