ರಾಜ್ಯದಲ್ಲಿ ಬಿ.ಎಫ್‌-7 ಸೋಂಕಿತರಿಗೆ ಚಿಕಿತ್ಸೆ ಉಚಿತ

0

ಬೆಳಗಾವಿ: ರಾಜ್ಯದಲ್ಲಿ  ಕೊರೋನಾ ಉಪಪ್ರಭೇದ ಬಿ.ಎಫ್‌-7 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುವುದೆಂದು ರಾಜ್ಯ ಸರಕಾರ ಪ್ರಕಟಿಸಿದೆ. 

ಎಲ್ಲಾ ಶಂಕಿತ ಕೋವಿಡ್‌ ಸೋಂಕಿತರನ್ನು ನಿಗಾ ಮತ್ತು ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್‌ ಮತ್ತು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್‌ ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ಬೆಡ್‌, ಐಸಿಯು, ವೆಂಟಿಲೇಟರ್‌, ಪೈಪ್‌ಲೈನ್‌ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here