ಸ್ಕೇಟಿಂಗ್‌ನಲ್ಲಿ ರಾಜ್ಯಕ್ಕೆ 2ಚಿನ್ನ, 1 ಬೆಳ್ಳಿ ಪದಕ- ಮಂಗಳೂರು ಯುವಕನ ಸಾಧನೆ

0

ಬೆಂಗಳೂರು: ಬೆಂಗಳೂರಿನಲ್ಲಿ ರೋಲರ್‌ ಸ್ಕೇಟಿಂಗ್‌ ಫೆಡರೇಷನ್‌ ಅಫ್‌ ಇಂಡಿಯಾ ಆಶ್ರಯದಲ್ಲಿ ನಡೆದ 60 ನೇ ರಾಷ್ಟ್ರಮಟ್ಟದ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್ ಸ್ಪರ್ಧೆಯ 14-17 ವರ್ಷದ ಬಾಲಕರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಹೈ-ಫ್ಲೈಯರ್ಸ್‌ ಸ್ಕೇಟಿಂಗ್‌ ಕ್ಲಬ್‌ನ ಮಹಮ್ಮದ್‌ ಶಾಮಿಲ್ ಅರ್ಷದ್‌ 500+‌ ಡಿರಿಂಕ್‌ ರೇಸ್‌ ಮತ್ತು ಮಿಕ್ಸೆಡ್‌ ರಿಲೇಯಲ್ಲಿ ಚಿನ್ನದ ಪದಕ, ವನ್ ಲ್ಯಾಪ್‌ ರೋಡ್‌‌ರೇಸ್‌ ನಲ್ಲಿ  ಬೆಳ್ಳಿಯ ಪದಕ ಪಡೆದಿದ್ದಾರೆ. ಮಂಗಳೂರಿನ ಯೆನೆಪೋಯ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಶಾಮಿಲ್‌ ಅರ್ಷದ್‌ ಹುಸೈನ್‌ ಮತ್ತು ರಮ್ಲತ್‌ ದಂಪತಿಯ ಪುತ್ರನಾಗಿದ್ದಾನೆ. ಮೋಹನ್‌ ದಾಸ್‌ ಮತ್ತು  ಜಯರಾಜ್‌ ಮಾರ್ಗದರ್ಶನದಲ್ಲಿ ಫ್ರಾನ್ಸಿಸ್‌ ಡೋರಿಸ್‌ ಸ್ಕೇಟ್‌ ಸಿಟಿಯಲ್ಲಿ ಅರ್ಷದ್‌ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here