ದೆಹಲಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಅವರನ್ನು ಕೊಲೆಗೈಯಲಾಗಿದೆ ಎಂದು ಸುಶಾಂತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ರೂಪ್ ಕುಮಾರ್ ಷಾ ಸಂದರ್ಶನ ಒಂದರಲ್ಲಿ ಸುಶಾಂತ್ ಸಾವಿನ ಎರಡು ವರ್ಷದ ಬಳಿಕ ಹೇಳಿದ್ದಾರೆ.
ಸುಶಾಂತ್ ಮೃತದೇಹದಲ್ಲಿ ಗಾಯದ ಗುರುತುಗಳಿದ್ದವು, ಕುತ್ತಿಗೆಯಲ್ಲೂ ಎರಡು ಗುರುತುಗಳಿದ್ದವು, ಮರಣೋತ್ತರ ಪರೀಕ್ಷೆಯ ಸಂದರ್ಭ ವಿಡಿಯೋ ರೆಕಾರ್ಡ್ ಮಾಡುವುದು ಅಗತ್ಯವಾಗಿದ್ದರೂ ಮೇಲಾಧಿಕಾರಿಗಳ ಸೂಚನೆಯಂತೆ ಫೋಟೋ ಮಾತ್ರ ತೆಗೆಯಲಾಗಿತ್ತು. ಎಂಬ ಅವರ ಹೇಳಿಕೆ ಈಗ ಸಂಚಲನವನ್ನುಂಟು ಮಾಡಿದೆ. ಸುಶಾಂತ್ ಸಿಂಗ್ ಮೃತದೇಹ ಮುಂಬೈನಅಪಾರ್ಟ್ ಮೆಂಟ್ ಒಂದರಲ್ಲಿ ಜೂನ್ 2020ರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.