ದೆಹಲಿ: ಭಾರತೀಯ ಔಷಧಿ ಕಂಪೆನಿ ಮರಿಯನ್ ಬಯೋಟೆಕ್ ಪ್ರೈ. ಲಿಮಿಟೆಡ್ ಉತ್ಪಾದನೆಯ ಢಾಕ್ ಒನ್ ಮ್ಯಾಕ್ಸ್ ಕೆಮ್ಮಿನ ಶಿರಫ್ ಸೇವನೆ ಬಳಿಕ ಉಜ್ಬೇಕಿಸ್ಥಾನದಲ್ಲಿ ಕನಿಷ್ಠ 18 ಮಕ್ಕಳು ಸಾವನಪ್ಪಿರುವುದಾಗಿ ಅಲ್ಲಿನ ಸರಕಾರ ನಿನ್ನೆ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯ ನೋಯ್ಡಾ ಘಟಕಕ್ಕೆ ತೆರಳಿದ ಉತ್ತರ ಪ್ರದೇಶ ಔಷಧ ನಿಯಂತ್ರಣ ಇಲಾಖೆ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಶಿರಫ್ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಕೆಮ್ಮಿನ ಶಿರಫ್ ಉತ್ಪಾದನೆಯನ್ನು ಕಂಪೆನಿ ಇಂದಿನಿಂದ ಸ್ಥಗಿತಗೊಳಿಸಿದೆ.