ಜ. 1ರಿಂದ 5: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ಇದರ 22ನೇ ವಾರ್ಷಿಕ ಮಹಾ ಸಂಭ್ರಮ

0

ಉಪ್ಪಿನಂಗಡಿ: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಇದರ 22ನೇ ಮಹಾ ಸಂಭ್ರಮ ಮಸೀದಿ ಗೌರವಾಧ್ಯಕ್ಷ ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ಜ. 1ರಿಂದ 5ರ ತನಕ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಅಹ್ಮದ್ ಕುಂಞ ಹೆಚ್. ಮತ್ತು ಕಾರ‍್ಯದರ್ಶಿ ಸಿರಾಜ್ ಬಡ್ಡಮೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 1ರಂದು ಇರ್ಷಾದ್ ದಾರಿಮಿ ಅಲ್ ಅಝ್‌ಹರಿ ಮಿತ್ತಬೈಲ್‌ರವರ ಪ್ರಾರ್ಥನೆಯೊಂದಿಗೆ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಉದ್ಘಾಟಿಸಲಿದ್ದಾರೆ. ಅನ್ವರಲಿ ಹುದವಿ ಮಲಪ್ಪುರಂ ಕೇರಳ ಮುಖ್ಯ ಪ್ರಭಾಷಣ ನೀಡಲಿದ್ದಾರೆ.

ಜ. 2ರಂದು ಕಬೀರ್ ಹಿಮಮಿ ಸಖಾಫಿ ಗೋಳಿಯಡ್ಕ ಕಾಸರಗೋಡು, ಜ. 3ರಂದು ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಕಾಞಂಗಾಡ್ ಕೇರಳ, ಜ. 4ರಂದು ಅಬೂಬಕ್ಕರ್ ಸಿದ್ದಿಕ್ ಅಝ್‌ಹರಿ ಪಯ್ಯನ್ನೂರು ಕೇರಳ ಇವರುಗಳು ಮುಖ್ಯ ಪ್ರಭಾಷಣ ನೀಡಲಿದ್ದಾರೆ.

ಸಮಾರೋಪ ಸಮಾರಂಭ:

ಜ. 5ರಂದು ದಿಕ್ರ್ ಹಲ್ಕಾ ಇದರ 22ನೇ ಮಹಾ ಸಂಭ್ರಮ ನಡೆಯಲಿದೆ. ಆತೂರು ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾಃಶೀರ್ವಚನ ನೀಡಲಿದ್ದು, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಪ್ರಧಾನ ಕಾರ‍್ಯದರ್ಶಿ ಶೈಖುನಾ ಎಂ.ಟಿ. ಉಸ್ತಾದ್ ಸಭಾ ಕಾರ‍್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬೆಳ್ತಂಗಡಿ ದಾರುಸ್ಸಲಾಂ ಎಜುಕೇಶನಲ್ ಸೆಂಟರ್ ಕಾರ್ಯಾಧ್ಯಕ್ಷ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅನುಗ್ರಹ ಭಾಷಣ ಮಾಡಲಿದ್ದಾರೆ. ಶಮೀರ್ ದಾರಿಮಿ ಕೊಲ್ಲಂ ಕೇರಳ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಹಾಗೂ ಹಲವಾರು ಮಂದಿ ಉಲೆಮಾ ಶಿರೋಮಣಿಗಳು, ಧಾರ್ಮಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಸೀದಿ ಅಧ್ಯಕ್ಷ ಅಹ್ಮದ್ ಕುಂಞ ಮತ್ತು ಕಾರ‍್ಯದರ್ಶಿ ಸಿರಾಜ್ ಬಡ್ಡಮೆ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here