ದಾನ ನಮ್ಮೊಂದಿಗೆ ಬರುವ ನೈಜ ಸಂಪತ್ತು : ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

0

ಉಪ್ಪಿನಂಗಡಿ: ಇಹ ಲೋಕದ ಸಂಪತ್ತು ಪರಲೋಕದಲ್ಲೂ ಬಳಕೆಯಾಗಬೇಕಾದರೆ ಸತ್ಕಾರ್ಯದಲ್ಲಿ ತೊಡಗಬೇಕು. ಸತ್ಕಾರ್ಯಕ್ಕೆ ಹಾಗೂ ಸತ್ ಪಾತ್ರರಿಗೆ ಮಾಡುವ ದಾನವು ನಮ್ಮೊಂದಿಗೆ ಬರುವ ನೈಜ ಸಂಪತ್ತಾಗಿರುತ್ತದೆ ಎಂದು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಇಲ್ಲಿನ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ತಿಳಿಸಿದರು.


15ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಅತ್ರಬೈಲು ಬೆಳ್ಳಿಪ್ಪಾಡಿ ರಾಮದಾಸ ರೈ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.

ಧಾರ್ಮಿಕ ಉಪನ್ಯಾಸ ನೀಡಿದ ಉಪನ್ಯಾಸಕಿ ಶ್ರೀಮತಿ ಅರ್ಪಿತಾ ಪ್ರಸಾದ್ ಶೆಟ್ಟಿ ಮಾತನಾಡಿ, ದೇವಾಲಯಗಳಲ್ಲಿನ ಪ್ರತಿಯೊಂದು ವಿಧಿ ವಿಧಾನಗಳಲ್ಲಿ ವೈಜ್ಞಾನಿಕ ಮಹತ್ವ ಅಡಗಿದೆ. ಧರ್ಮದ ಶಿಕ್ಷಣವನ್ನು ಒದಗಿಸುವ ಕಾರ್ಯ ಪ್ರತಿ ಮನೆಯಲ್ಲೂ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯ ಮಾತೆಯರೂ ತಮ್ಮ ತಮ್ಮ ಮಕ್ಕಳಲ್ಲಿ ಶಿವಾಜಿ ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತವನ್ನು ಮೂಡಿಸಲು ಶ್ರಮಿಸಬೇಕೆಂದರು.

ಅತಿಥಿಗಳಾಗಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಎಲ್ಲರನ್ನೂ ಪ್ರೀತಿಸುವ ಎಲ್ಲರಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ ಶ್ರೇಷ್ಠ ಧರ್ಮವಾಗಿದ್ದು, ಇದರ ಮಹತ್ವವನ್ನು ಅರಿತು ದೇವರನ್ನು ಸಾಕ್ಷಾತ್ಕಾರಗೊಳಿಸಲು ಶ್ರಮಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಗ್ರಾಮೀಣ ಪ್ರದೇಶದಲ್ಲಿನ ಈ ದೇವಾಲಯದ ನಿತ್ಯ ನಿರ್ವಹಣೆಯೇ ಸಂಕಷ್ಠಕರವಾಗಿದ್ದ ಸಮಯದಲ್ಲಿ ಬೈಲುವಾರು ಸಮಿತಿಯ ಮೂಲಕ ಇಡೀ ಗ್ರಾಮವನ್ನು ಒಗ್ಗೂಡಿಸಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಮತ್ತು ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಊರಿನ ಜನತೆ ನಿಜವಾಗಿಯೂ ಕಾರಣೀಕರ್ತರೆಂದು ಶ್ಲಾಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧನ್ಯ ಕುಮಾರ್ ರೈ ಹಾಗೂ ಬೈಲುವಾರು ಸಮಿತಿಯ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ಗಣ್ಯರಾದ ಡಾ. ಉಮ್ಮಪ್ಪ ಪೂಜಾರಿ ಪಿ., ಚೆನ್ನಪ್ಪ ಗೌಡ, ಲೀಲೇಶ್ ಆರ್ ಶೆಟ್ಟಿ ಪಾಂಡಿಬೆಟ್ಟು, ಆಡಳಿತ ಸಮಿತಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ್ ಕುಮಾರ್ ಮುಳಿಪಡ್ಪು ಉಪಸ್ಥಿತರಿದ್ದರು.

ಪದ್ಮಾಸಿನಿ ಎನ್. ಜೈನ್ ಕಳೆಂಜಗುತ್ತು, ಆಡಳಿತ ಸಮಿತಿಯ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎಸ್., ಅಧ್ಯಕ್ಷ ಶಂಭು ಭಟ್ ಬಡಕೋಡಿ, ಕಾರ್ಯದರ್ಶಿ ರಮೇಶ್ ತೋಟ, ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ, ಐತ್ತಪ್ಪ ಭಂಡಾರಿ ಮೇಗಿನಮನೆ, ಗಂಗಾಧರ ರೈ, ಶ್ರೀಧರ ಗೌಡ, ಸುರೇಶ್ ಆಚಾರ್ಯ ಬಿಳಿಯೂರು, ಮಹೇಶ್ ಪಡಿವಾಳ್ ಬಿಳಿಯೂರುಗುತ್ತು, ಮುತ್ತಪ್ಪ ಸಾಲ್ಯಾನ್ ಹನುಮಾಜೆ, ರಾಜಶೇಖರ ಶೆಟ್ಟಿ ಹಿರುಬೈಲು, ವಿಜೇತ್ ರೈ ಪಟ್ಟೆಜಾಲು, ವೇಣುಗೋಪಾಲ ಶೆಟ್ಟಿ ಪಟ್ಟೆಜಾಲು, ಸದಾಶಿವ ಶೆಟ್ಟಿ ವಂಜನಪಳಿಕೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೊರೆಕಾಣಿಕೆ ಸಮಿತಿಯ ನವೀನ್ ರೈ ಪದಬರಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ ವಂದಿಸಿದರು. ಬಾಲಕೃಷ್ಣ ಆಳ್ವ ಹಾಗೂ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here