ನೇರೆಂಕಿಗುತ್ತು ದೈವಗಳ ನೇಮೋತ್ಸವ : ಗೊನೆ ಮುಹೂರ್ತ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜ.5 ಮತ್ತು 6ರಂದು ನಡೆಯಲಿರುವ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವಕ್ಕೆ ಡಿ.30ರಂದು ಗೊನೆಮುಹೂರ್ತ ನಡೆಯಿತು.


ಶಿವಪ್ಪ ಪಡ್ಡಾಯಿಬೆಟ್ಟು ಅವರು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಕಾರ್ಯದರ್ಶಿ ಕಿರಣ್ ಪಾದೆ, ಮಾಸ್ಟರ್ ಪ್ಲಾನರಿಯ ಸತ್ಯನಾರಾಯಣ ಭಟ್, ಗ್ರಾಮಸ್ಥರಾದ ರಮೇಶ ರೈ ರಾಮಜಾಲು, ಸಂಜೀವ ಮುಳಿಮಜಲು, ನಾಣ್ಯಪ್ಪ ಗೌಡ ಕನೆಮಾರು, ಸಂಕಪ್ಪ ಪೂಜಾರಿ ಸಾಂತ್ಯ, ರುಕ್ಮಯ್ಯ ಗೌಡ ನೇರೋಳ್ತಳಿಕೆ, ಲಿಂಗಪ್ಪ ಪಾತೃಮಾಡಿ, ಕೇಶವ ಹಿರಿಂಜ, ಗೋಪಾಲಕೃಷ್ಣ ಸಾಂತ್ಯ, ವೆಂಕಪ್ಪ ಬರೆಂಬೆಟ್ಟು, ಮೋನಪ್ಪ ಆರಾಟಿಗೆ, ಬಾಬು ಕೊಳಂಬೆ, ಜತ್ತಪ್ಪ ಗೌಡ ಬರೆಂಬೆಟ್ಟು, ಪೂವಪ್ಪ ಕುಂಞಿಕ್ಕು, ಕೊರಗಪ್ಪ ಬರೆಂಬೆಟ್ಟು, ಅಣ್ಣಿ ಪೂಜಾರಿ ಆರಾಟಿಗೆ, ಪೊಡಿಯಾ, ಅಣ್ಣು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here