ಗೋಳಿತ್ತಡಿ: ಸನ್ನಿಧಿ ಮೆಡಿಕಲ್ಸ್, ಜನರಲ್ ಸ್ಟೋರ‍್ಸ್ ಶುಭಾರಂಭ

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿರುವ ಶಿಮಿಕಾ ಮಹಲ್‌ನಲ್ಲಿ ಸನ್ನಿಧಿ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ‍್ಸ್ ಡಿ.31ರಂದು ಬೆಳಿಗ್ಗೆ ಶುಭಾರಂಭಗೊಂಡಿತು.


ಅರ್ಚಕ ಶ್ರೀನಿವಾಸ ಭಟ್ ರಂಗಾಜೆ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಉಪ್ಪಿನಂಗಡಿ ಸವಿ ಎಲೆಕ್ಟ್ರಾನಿಕ್ಸ್‌ನ ಮಾಲಕ ನವೀನ್‌ಕುಮಾರ್, ಉಪ್ಪಿನಂಗಡಿ ಎಸ್‌ಪಿ ಗ್ಯಾಸ್ ಸರ್ವೀಸ್ ಸೆಂಟರ್‌ನ ನಿತೇಶ್, ಗೋಳಿತ್ತಡಿ ಸವಿ ಎಂಟರ್‌ಪ್ರೈಸಸ್‌ನ ಪ್ರವೀಣ್, ಮಾಲಕ ಶರತ್ ಕೆ. ಅವರ ತಾಯಿ ಉಮಾವತಿ ಪುಳಿತ್ತಡಿ, ಸಹೋದರರಾದ ನಿತಿನ್ ಪುಳಿತ್ತಡಿ, ನಿತೇಶ್ ಪುಳಿತ್ತಡಿ, ಸಹೋದರಿ ಸುಮಿತ್ರಾ ಪುಳಿತ್ತಡಿ ಹಾಗೂ ಇನ್ನಿತರ ಪ್ರಮುಖರು ಆಗಮಿಸಿ ಶುಭ ಹಾರೈಸಿದರು.

ಮಾಲಕ ಶರತ್ ಕೆ.ಪುಳಿತ್ತಡಿ ಮಾತನಾಡಿ, ನಮ್ಮಲ್ಲಿ ಎಲ್ಲಾ ತರಹದ ಔಷಧಿಗಳು, ಸೌಂದರ್ಯ ವರ್ಧಕಗಳು, ಪಶು ಮತ್ತು ಸಾಕುಪ್ರಾಣಿಗಳ ಔಷಧಿಗಳು, ನ್ಯೂಟ್ರಿಷನ್ಸ್ ಹಾಗೂ ಮಕ್ಕಳ ಪೌಷ್ಠಿಕ ಆಹಾರಗಳು ಲಭ್ಯವಿದೆ. ಹೋಮ್ ಡೆಲಿವರಿ ವ್ಯವಸ್ಥೆಯೂ ಇದೆ ಎಂದು ತಿಳಿಸಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here