ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಜುಪಿಟರ್ ಗೆಲ್ಲುವ ಅವಕಾಶಕ್ಕೆ ಅದೃಷ್ಟದಾರರ ಆಯ್ಕೆ: ಉತ್ತಮ ಸೇವೆ ನೀಡಿದ್ದರಿಂದ ಉತ್ತಮ ಹೆಸರು – ಡಾ.ಭಾಸ್ಕರ್

0

  

ಪುತ್ತೂರು : ಹಬ್ಬಗಳ ಸಂದರ್ಭದಲ್ಲಿ ಅದೃಷ್ಟ ಚೀಟಿಯ ಮೂಲಕ ಗ್ರಾಹಕರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಗೃಹೋಪಯೋಗಿ ಮತ್ತು ವಾಹನ ಗೆಲ್ಲುವ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕರ ಮನಗೆದ್ದ ಪುತ್ತೂರಿನ ಶೇಟ್ ಇಲೆಕ್ಟ್ರಾನಿಕ್ಸ್ ಈ ಭಾರಿ ಹಬ್ಬಗಳ ಮತ್ತು ಹೊಸ ವರ್ಷದ ಸಲುವಾಗಿ ೧೬ನೇ ಬಂಪರ್ ಬಹುಮಾನವಾಗಿ ಜುಪಿಟರ್ ಗೆಲ್ಲುವ ಅವಕಾಶದ ಅದೃಷ್ಟ ಗ್ರಾಹಕರ ಆಯ್ಕೆಯ ಡ್ರಾವನ್ನು ಡಿ.೩೧ರಂದು ಸಂಸ್ಥೆಯಲ್ಲಿ ನಡೆಸಲಾಯಿತು.


ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಅದೃಷ್ಟದ ಚೀಟಿಯನ್ನು ಎತ್ತುವ ಮೂಲಕ ಡ್ರಾ ವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಉತ್ತಮ ಸೇವೆ ನೀಡಿ ಉತ್ತಮ ಹೆಸರು ಪಡೆದ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಗ್ರಾಹಕರ ಖರೀದಿ ಜೊತೆಗೆ ಅವರ ಉತ್ತಮ ಸಂಬಂಧ ಬೆಳೆಯುತ್ತಿದೆ.

ಇದು ಮುಂದೆಯು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ, ದಿ ಪುತ್ತೂರು ಕ್ಲಬ್ ಉಪಾಧ್ಯಕ್ಷ ದೀಪಕ್ ಕೆ.ಪಿ, ಗಿಫ್ಟ್ ಬಜಾರ್‌ನ ಮಾಲಕ ಎಂ.ಜಿ.ರಫೀಕ್ ಸಹಿತ ಗ್ರಾಹಕರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರೂಪೇಶ್ ಶೇಟ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಂಪರ್ ಬಹುಮಾನವು ಯತೀಶ್ ಎಂಬ ಹೆಸರಿನ ಕೂಪನ್ ಸಂಖ್ಯೆ ಎಬಿ ೯೦೮೪ ಗೆ ಬಂದಿದೆ ಎಂದು ಘೋಷಣೆ ಮಾಡಲಾಯಿತು.


ಕೂಪನ್ ಅವಕಾಶ ಮುಂದುವರಿಯಲಿದೆ:
ಹಬ್ಬಗಳ ಮತ್ತು ಹೊಸ ವರ್ಷದ ಸಲುವಾಗಿ ಗ್ರಾಹಕರಿಗೆ ಆಗಾಗೆ ಖರೀದಿಯ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಈ ಭಾರಿ ಕೇವಲ ರೂ.೨೩ ಪಾವತಿಸಿ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ, ಸಿಸಿಟಿವಿಗೆ ಶೇ.೫೦ರವರೆಗೆ ರಿಯಾಯಿತಿ, ಫ್ರಿಡ್ಜ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಲ್‌ಇಡಿ ಟಿವಿ, ಎಸಿ, ಮಿಕ್ಸಿ, ಗ್ರೈಂಡರ್ ಖರೀದಿಗೆ ೨೩ ಗಿಫ್ಟ್ ಉಚಿತ ನೀಡಲಾಗುತ್ತಿತ್ತು. ಈ ಅವಕಾಶವನ್ನು ಜ.೮ರ ತನಕ ಮುಂದುವರಿಸಲಾಗುವುದು. ಇದರ ಜೊತೆಗೆ ಹೊಸದಾಗಿ ಬಂಪರ್ ಬಹುಮಾನದ ಯೋಜನೆಗೆ ಕೂಪನ್ ಅವಕಾಶ ಮುಂದುವರಿಸಲಾಗುತ್ತದೆ. ಬಹುಮಾನವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು.ರೂಪೇಶ್ ಶೇಟ್, ಮಾಲಕರು ಶೇಟ್ ಇಲೆಕ್ಟ್ರಾನಿಕ್ಸ್ ಪುತ್ತೂರು

LEAVE A REPLY

Please enter your comment!
Please enter your name here