ಅಮಿತ್ ಶಾ ಅವರೇ ಉತ್ತರ ಕೊಟ್ಟು ಹೋಗಿ -ಹೆಚ್‌.ಡಿ. ಕುಮಾರಸ್ವಾಮಿ

0

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಟುಂಬದ ಏಟಿಮ್ ಆಗುತ್ತದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಬಿಜೆಪಿ ಯ ಕುಟುಂಬ ರಾಜಕಾರಣದ ಪಟ್ಟಿ ಬಿಡುಗಡೆಗೊಳಿಸಿ ಟ್ವೀಟ್ ಮಾಡಿದ್ದಾರೆ.



ಮಾಜಿ ಮುಖ್ಯಮಂತ್ರಿ ಬಿ ಎಸ್ ಯೆಡಿಯೂರಪ್ಪ ಸೇರಿದಂತೆ 15 ಮಂದಿ ಬಿಜೆಪಿ ನಾಯಕರ ಹೆಸರನ್ನು ಪ್ರಕಟಿಸಿದ್ದಾರೆ ಮಾತ್ರವಲ್ಲದೆ ಇದು ಅಪೂರ್ಣ ಪಟ್ಟಿ ರಾಷ್ಟ್ರೀಯ ಪಟ್ಟಿ ಬೇಕಿದ್ದರೆ ಕೇಳಿ. ಇದರ ಹತ್ತರಷ್ಟಿದೆ.ಇಂದು ಬೆಂಗಳೂರಿನಿಂದ ಹೊರಡುವ ಮುನ್ನ ಇದಕೆಲ್ಲ ಉತ್ತರ ಕೊಡಿ. ಎಷ್ಟಾದರೂ ನೀವು ಸ್ವಯಂ ಘೋಷಿತ ಸಾಚಾ ಅಲ್ಲವೇ? ಉತ್ತರ ಹೇಳಿ ಹೋದರೆ ನಾವು ಧನ್ಯರಾಗುತ್ತೇವೆ. ಸತ್ಯ ಅಜರಾಮರ, ಅಸತ್ಯ ನಿಮ್ಮ ಹಣೆಬರಹ. ಸತ್ಯದ ಮುಂದೆ ದಮ್ಮು ತಾಕತ್ತು ದುರ್ಬಲ. ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here